ಕರ್ನಾಟಕ

karnataka

ETV Bharat / state

ಇಂದು ಕೂಡ ಎರಡು ಪ್ರಕರಣ.. ರಾಯಚೂರಿನಲ್ಲಿ ಏರುತ್ತಿದೆ ಕೊರೊನಾ ಪೀಡಿತರ ಸಂಖ್ಯೆ.. - raichuru news

ಶುಕ್ರವಾರ ಲಿಂಗಸೂಗೂರು ತಾಲೂಕಿನಿಂದ 58, ಮಾನ್ವಿ ತಾಲೂಕಿನಿಂದ 62, ಸಿಂಧನೂರು ತಾಲೂಕಿನಿಂದ 9 ಮತ್ತು ರಾಯಚೂರು ತಾಲೂಕಿನಿಂದ 22, ಎರಡು ಸಾರಿ ಸೇರಿ 151 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

two corona case found in raichuru
ರಾಯಚೂರಲ್ಲಿ ಏರುತ್ತಿದೆ ಕೊರೊನಾ ಪೀಡಿತರ ಸಂಖ್ಯೆ

By

Published : Jun 5, 2020, 9:40 PM IST

ರಾಯಚೂರು: ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣ‌ ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 358ಕ್ಕೆಏರಿಕೆಯಾಗಿದೆ.

ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದ 35 ವರ್ಷ ವ್ಯಕ್ತಿ (ಆರ್​ಸಿಆರ್-357), ದೇವದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮದ 24 ವರ್ಷ ಮಹಿಳೆಗೆ (ಆರ್​ಸಿಆರ್- 358) ಸೋಂಕು ತಗುಲಿದ್ದು, ಇವರಿಬ್ಬರು ಮಹಾರಾಷ್ಟ್ರದಿಂದ ಬಂದಿದ್ದಾರೆ. 37 ಜನ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, 321 ಪ್ರಕರಣ ಸಕ್ರಿಯವಾಗಿವೆ.

ಶುಕ್ರವಾರ ಲಿಂಗಸೂಗೂರು ತಾಲೂಕಿನಿಂದ 58, ಮಾನ್ವಿ ತಾಲೂಕಿನಿಂದ 62, ಸಿಂಧನೂರು ತಾಲೂಕಿನಿಂದ 9 ಮತ್ತು ರಾಯಚೂರು ತಾಲೂಕಿನಿಂದ 22, ಎರಡು ಸಾರಿ ಸೇರಿ 151 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ಮುಂಚೆ ಕಳುಹಿಹಿಸಲಾದ ವರದಿಗಳಲ್ಲಿ 140 ನೆಗೆಟಿವ್ ಬಂದಿವೆ. ಈವರೆಗೆ 17,040 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಿದ್ದು, ಅದರಲ್ಲಿ 15,645 ವರದಿ ನೆಗೆಟಿವ್ ಆಗಿವೆ. ಉಳಿದಂತೆ 885 ಮಾದರಿಗಳ ಫಲಿತಾಂಶ ಬರಬೇಕಿದೆ. ಫೀವರ್ ಕ್ಲಿನಿಕ್‍ಗಳಲ್ಲಿಂದು 538 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ.

ಸಾಂಸ್ಥಿಕ ಕ್ವಾರಂಟೈನ್‍ಗಳಿಂದ 261 ಜನರನ್ನು ಬಿಡುಗಡೆ ಮಾಡಲಾಗಿದೆ. 14 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎಂಟು ಜನರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಅದರಲ್ಲಿ 15 ಜನ ಗುಣಮುಖವಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ‌ತಿಳಿಸಿದೆ.

ABOUT THE AUTHOR

...view details