ರಾಯಚೂರು :ಸಿಡಿಲು ಬಡಿದು ಸಹೋದರರಿಬ್ಬರು ಅಸುನೀಗಿದ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಸಿಂಗನೋಡಿ ಗ್ರಾಮದ ಹೊರವಲಯದಲ್ಲಿರುವ ಗೋವಿಂದ ಎಂಬುವರ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಿಡಿಲು ಬಡಿದು ಸಹೋದರರಿಬ್ಬರು ಬಲಿ - North Karnataka Rainfall
ಮಳೆಯಾಗುತ್ತಿದ್ದ ವೇಳೆ ಜಮೀನಿನ ಜೋಪಡಿ ಬಳಿ ಬಂದಿದ್ದ ಸಹೋದರರಿಬ್ಬರು ಸಿಡಿಲಿಗೆ ಬಲಿಯಾದರೆ ತಾಯಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ರಾಯಚೂರು: ಸಿಡಿಲು ಬಡಿದು ಸಹೋದರರಿಬ್ಬರು ಬಲಿ
ರವಿಚಂದ್ರ(23), ವಿಷ್ಣು(18) ಮೃತ ಅಣ್ಣ ಮತ್ತು ತಮ್ಮಂದಿರಾಗಿದ್ದು, ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯ ಜಮೀನಿನಲ್ಲಿ ದನಗಳಿಗಾಗಿ ಜೋಪಡಿ ಹಾಕಿದ್ದು, ಜೋಪಡಿಗೆ ತೆರಳಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.
ಇದರಿಂದ ಅಣ್ಣ-ತಮ್ಮ ಸ್ಥಳದಲ್ಲಿಯೇ ಸಾವನಪ್ಪಿದ್ರೆ, ತಾಯಿ ಸಣ್ಣ-ಪುಟ್ಟ ಗಾಯದೊಂದಿಗೆ ಬದುಕುಳಿದಿದ್ದಾಳೆ. ಇನ್ನೂ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.