ರಾಯಚೂರು: ರಿಮ್ಸ್ ಆಸ್ಪತ್ರೆ ಆವರಣದ ಬೈಕ್ ಸ್ಟ್ಯಾಂಡ್ನಲ್ಲಿದ್ದ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಲಾಗಿದೆ ಎಂದು ಎಸ್ಪಿ ನಿಕ್ಕಂ ಪ್ರಕಾಶ್ ತಿಳಿಸಿದ್ದಾರೆ.
ಇಬ್ಬರು ಬೈಕ್ ಕಳ್ಳರ ಬಂಧನ: 5 ಲಕ್ಷ ರೂ. ಮೌಲ್ಯದ 17 ಬೈಕ್ಗಳು ವಶಕ್ಕೆ - ರಾಯಚೂರು ಸುದ್ದಿ
ರಿಮ್ಸ್ ಆಸ್ಪತ್ರೆ ಆವರಣದ ಬೈಕ್ ಸ್ಟ್ಯಾಂಡ್ನಲ್ಲಿದ್ದ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ.
![ಇಬ್ಬರು ಬೈಕ್ ಕಳ್ಳರ ಬಂಧನ: 5 ಲಕ್ಷ ರೂ. ಮೌಲ್ಯದ 17 ಬೈಕ್ಗಳು ವಶಕ್ಕೆ two bike thieves Arrested In Raichur](https://etvbharatimages.akamaized.net/etvbharat/prod-images/768-512-8922626-thumbnail-3x2-nincopy.jpg)
ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮಾರ್ಕೆಟ್ ಯಾರ್ಡ್, ಸದರ್ ಬಜಾರ್, ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ಕಂಡುಬರುತ್ತಿದ್ದವು. ಹೀಗಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಇದೀಗ ಆ ತಂಡ ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆ ಮಾಡಿದ್ದು, ಬೈಕ್ಗಳ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರ್ಟಿಪಿಎದ್ನಲ್ಲಿ ದಿನಗೂಲಿ ಮಾಡುತ್ತಿದ್ದ ಮಾರ್ಚೆಡ್ ಗ್ರಾಮದ ರಾಮು ಜಂಬಯ್ಯ ಹಾಗೂ ಬುಲ್ಡೋಜರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹೆಗ್ಗಸನಹಳ್ಳಿ ಗ್ರಾಮದ ಬಸವರಾಜ ಲಕ್ಷ್ಮಣ ಬಂಧಿತ ಬೈಕ್ ಕಳ್ಳರಾಗಿದ್ದಾರೆ. ಇನ್ನು ಆರೋಪಿಗಳಿಂದ 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದು, ಈ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದರು.