ಕರ್ನಾಟಕ

karnataka

ETV Bharat / state

ಬಾಟಲ್​ ಮೇಲೆ ಬ್ರಾಂಡೆಡ್​ ಸ್ಟಿಕ್ಕರ್, ಒಳಗಡೆ ಮಾತ್ರ ನಕಲಿ ಲಿಕ್ಕರ್: ಬ್ರ್ಯಾಂಡ್​​ ಹೆಸರಲ್ಲಿ ಕಿಕ್​ ಕೊಡಲು ಹೊರಟ್ಟಿದವರ ಬಂಧನ - ರಾಯಚೂರು ಕ್ರೈಂ ನ್ಯೂಸ್​

ಬ್ರ್ಯಾಂಡ್​ ಹೆಸರಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬ್ರ್ಯಾಂಡ್​​ ಹೆಸರಲ್ಲಿ ನಕಲಿ ಲಿಕ್ಕರ್
ಬ್ರ್ಯಾಂಡ್​​ ಹೆಸರಲ್ಲಿ ನಕಲಿ ಲಿಕ್ಕರ್

By

Published : Apr 5, 2023, 2:09 PM IST

Updated : Apr 5, 2023, 5:06 PM IST

ನಕಲಿ ಮದ್ಯ ಮಾರಾಟ ಪ್ರಕರಣ

ರಾಯಚೂರು:ಬ್ರ್ಯಾಂಡ್​ ಹೆಸರಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದವರ ಜಾಲವೊಂದು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ನಕಲಿ ಮದ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ರಾಮನಗೌಡ ಬಂಧಿತ ಆರೋಪಿ. ಬ್ರ್ಯಾಂಡ್ ಕಂಪನಿಯ ಬಾಟಲ್​ನಲ್ಲಿ ನಕಲಿ ಮದ್ಯ ತುಂಬಿಸಿ, ಆ ಕಂಪನಿಯ ಕ್ಯಾಪ್ ಮತ್ತು ಲೇಬಲ್​ಗಳನ್ನು ಅಂಟಿಸಿ ಡಾಬಾಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

10 ಬಾಕ್ಸ್ ಲಿಕ್ಕರ್ ಜಪ್ತಿ :ಬಂಧಿತರಿಂದ 524ಕ್ಕೂ ಹೆಚ್ಚು ಬ್ರ್ಯಾಂಡೆಡ್​ ಕಂಪನಿಯ ಬಾಟಲ್​ಗಳು, 80ಕ್ಕೂ ಹೆಚ್ಚು ಲೀಟರ್ ನಕಲಿ ಮದ್ಯ, ದಂಧೆಗೆ ಬಳಸಿದ ಒಂದು ಹೋಂಡಾ ಆಕ್ಟಿವ್ ಬೈಕ್, ಆಟೋ, 298 ಬ್ರ್ಯಾಂಡೆಡ್ ​ಮದ್ಯದ ಖಾಲಿ ಬಾಟಲ್​ಗಳು, 10 ಬಾಕ್ಸ್ ಲಿಕ್ಕರ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿ ಲಕ್ಷ್ಮೀ ನಾಯಕ ಅವರು ಮಾತನಮಾಡಿ, ವಿಧಾನಸಭೆ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ನಿನ್ನೆ ದಿನ ಅಬಕಾರಿ ನಿರೀಕ್ಷಕರಾದ ಹನುಮಂತ ಗುತ್ತೇದಾರ ಹಾಗು ಇಲಾಖೆ ಸಿಬ್ಬಂದಿಗಳು ನಗರದಲ್ಲಿ ಗಸ್ತಲ್ಲಿರಬೇಕಾದರೆ ರೈಲು ನಿಲ್ದಾಣದ ಹಿಂಭಾಗದಲ್ಲಿ, ರನ್ನಿಂಗ್​ ರೂಮ್​ ಬಳಿ ಓರ್ವ ವ್ಯಕ್ತಿ ಸ್ಕೂಟಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಆತನನ್ನು ತಡೆದು ವಾಹನ ತಪಾಸಣೆ ನಡೆಸಲಾಗಿದೆ. ಆಗ ವಾಹನದಲ್ಲಿ 5 ಲೀಟರ್​ ಮದ್ಯ ಮತ್ತು ನಕಲಿ ಕ್ಯಾಪ್​ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ನಗರದ ಸಮೀಪದ ಗ್ರಾಮವಾದ ಕಡಗಂ ದೊಡ್ಡಿಯಿಂದ ತಂದಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ, ಕಡಗಂ ದೊಡ್ಡಿ ಮತ್ತು ಎಲ್​ಕೆ ದೊಡ್ಡಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ನಕಲಿ ಬಾಟಲ್​ಗಳು, ಕ್ಯಾಪ್​ಗಳು ಹಾಗು 10 ಕಾರ್ಟನ್ ಲಿಕ್ಕರ್​ಗಳು​ ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ, ಚಾಲಕ ಸೆರೆ; ₹47 ಲಕ್ಷ ಮೌಲ್ಯದ ಮಾಲು ವಶ

ವಿಜಯಪುರ: 47 ಲಕ್ಷ ಮೌಲ್ಯದ ಮದ್ಯ ವಶ.. ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದ ಅಬಕಾರಿ ಪೊಲೀಸರು ಚಾಲಕನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್‌ನಲ್ಲಿ ನಡೆದಿತ್ತು. ತುಮಕೂರು ನಿವಾಸಿ ಫೈರೋಜ್ ಸೈಯದ್ ಅಬ್ದುಲ್ ರಹಮಾನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದ್ದಾಗ 9,108 ಲೀಟರ್ ಬಿಯರ್ ಹಾಗೂ ಲಾರಿ ಸೇರಿ ಒಟ್ಟು 57,38,851 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇಂಡಿ ವಲಯ ಅಬಕಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಅಬಕಾರಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಬರೋಬ್ಬರಿ 54 ಲಕ್ಷ ಮೌಲ್ಯದ ಮದ್ಯ ವಶ

Last Updated : Apr 5, 2023, 5:06 PM IST

ABOUT THE AUTHOR

...view details