ರಾಯಚೂರು : ತುಂಗಭದ್ರಾ ಜಲಾಶಯದ ನೀರು ಸರಬರಾಜು ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಹಿನ್ನೆಲೆ ಮುಷ್ಕರಕ್ಕೆ ಮುಂದಾಗಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತುಂಗಭದ್ರಾ ಜಲಾಶಯ ಹಂಗಾಮಿ ಕಾರ್ಮಿಕರ ಮುಷ್ಕರ - ತುಂಗಭದ್ರಾ ಜಲಾಶಯ ಹಂಗಾಮಿ ಕಾರ್ಮಿಕರ ಮುಷ್ಕರ
ಫೆ. 26ರಂದು ಮುನಿರಾಬಾದ್ ತುಂಗಭದ್ರಾ ನೀರಾವರಿ ಇಲಾಖೆ ಕಚೇರಿ ಬಳಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತುಂಗಭದ್ರಾ ಜಲಾಶಯದ ಹಂಗಾಮಿ ಕಾರ್ಮಿಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಕಳೆದ 20 ತಿಂಗಳನಿಂದ ತುಂಗಭದ್ರಾ ಕಾಲುವೆ ನೀರು ಸರಬರಾಜು ಮಾಡುವ ಕಾರ್ಮಿಕರ ಗುತ್ತಿಗೆ ಪಡೆದ ಶಿವಮೊಗ್ಗ ಮೂಲದ ಡಿ. ರಾಜಣ್ಣ ಹೊರಗುತ್ತಿಗೆ ಏಜೇನ್ಸಿ ವೇತನ ನೀಡದೆ, ಕಾರ್ಮಿಕರ ಜೀವನದ ಜೊತೆ ವೇತನ ಆಟವಾಡುತ್ತಿದೆ. ಸಿಎಂ ಹೆಸರಿನಿಂದ ಏಜೇನ್ಸಿ ಪ್ರತಿ ತಿಂಗಳು ಹಣ ಪಡೆಯುತ್ತಿದ್ದರು ಕಾರ್ಮಿಕರಿಗೆ ಮಾತ್ರ ವೇತನ ನೀಡುತ್ತಿಲ್ಲ ಎಂಬುದು ನೌಕರರ ವಾದ.
ಸುಮಾರು 1500 ಕಾರ್ಮಿಕರು ತುಂಗಭದ್ರಾ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಗುತ್ತಿಗೆ ಪಡೆದ ಏಜೇನ್ಸಿ ವೇತನ ಪಾವತಿ ಮಾಡಬೇಕು ಅದ್ರೆ ಕಳೆದ 20 ತಿಂಗಳಿನಿಂದ ವೇತನ ನೀಡಿಲ್ಲವಂತೆ. ಈ ಕುರಿತು ಹಲವಾರು ಭಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರು ಸಹ ಪ್ರಯೋಜವಾಗಿಲ್ಲ ಅದಕ್ಕಾಗಿ ವೇತನ ಪಾವತಿ ಸೇರಿದಂತೆ ಇನ್ನೀತರ ಬೇಡಿಕೆಗಳನ್ನು ಇರಿಸಿಕೊಂಡು 2020 ಫೆ. 26ರಂದು ಮುನಿರಾಬಾದ್ ತುಂಗಭದ್ರಾ ನೀರಾವರಿ ಇಲಾಖೆ ಕಚೇರಿ ಬಳಿ ಮುಷ್ಕರಕ್ಕೆ ಅಣಿಯಾಗಿದ್ದಾರಂತೆ.
TAGGED:
ತುಂಗಭದ್ರಾ ಜಲಾಶಯ