ರಾಯಚೂರು: ಹನ್ನೆರಡು ವರ್ಷಕ್ಕೆ ಒಮ್ಮೆ ಬರುವ ಪುಷ್ಕರ ಪುಣ್ಯ ಸ್ನಾನ ಹಿನ್ನೆಲೆ ತಾಲ್ಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು.
ತುಂಗಭದ್ರಾ ಪುಷ್ಕರ ಪುಣ್ಯ ಸ್ನಾನ ಆರಂಭ: ಲಕ್ಷ ಜನರ ಆಗಮನ ನಿರೀಕ್ಷೆ - Pushkara in the Tungabhadra River
ತುಂಗಭದ್ರಾ ನದಿಯಲ್ಲಿ 12 ದಿನಗಳ ಕಾಲ ನಡೆಯುವ ಪುಣ್ಯ ಸ್ನಾನದ ಮೊದಲನೆಯ ದಿನದಂದು ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು. ಮುಂದಿನ ಹತ್ತು ದಿನಗಳಲ್ಲಿ ಒಂದು ಲಕ್ಷ ಜನರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದ್ದು, ಸ್ಥಳದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆಸ್ತಿಕರ ಪಾಲಿಗೆ ಪುಷ್ಕರ ಸಮಯದಲ್ಲಿ ಪುಣ್ಯ ಸ್ನಾನ ಅತ್ಯಂತ ಮಹತ್ವದಾಗಿದ್ದು, 12 ವರ್ಷಗಳಿಗೊಮ್ಮೆ ತುಂಗಭದ್ರಾ ನದಿಯಲ್ಲಿ ನಡೆಯುವ ಪುಷ್ಕರ ಇಂದಿನಿಂದ ಡಿ.1 ವರೆಗೆ ನಡೆಯಲಿದೆ.
ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ನೆರೆಯ ಆಂದ್ರಪ್ರದೇಶ ಸರ್ಕಾರ, ನದಿಯಲ್ಲಿ ಸ್ನಾನಕ್ಕೆ ಅವಕಾಶ ಕಲ್ಪಿಸದೆ ಕೇವಲ ನದಿಯ ನೀರು ಪ್ರೋಕ್ಷಣೆಗೆ ಅವಕಾಶ ಕಲ್ಪಿಸಿದೆ. ಆದರೆ, ಜಿಲ್ಲಾಡಳಿತ ಶರತ್ತುಬದ್ಧ ಅನುಮತಿ ನೀಡಿದ್ದು, ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಿಕಲಪರ್ವಿ, ತಾಲ್ಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಿದೆ.
ಭಕ್ತಾದಿ ರಮಣರೆಡ್ಡಿ ಮಾತನಾಡಿ, ಹನ್ನೆರಡು ವರ್ಷಕ್ಕೆ ಒಮ್ಮೆ ಬರುವ ಪುಷ್ಕರ ಪುಣ್ಯ ಸ್ನಾನ ಈ ವರ್ಷ ತುಂಗಭದ್ರಾ ನದಿಯಲ್ಲಿ ಬಂದಿದ್ದು, ಬೆಂಗಳೂರಿನಿಂದ ಬಂದಿರುವ ನಾವು ಸ್ಥಳೀಯ ಆಡಳಿತ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತಾದಿಗಳು ಗೊಂದಲಕ್ಕೆ ಆಸ್ಪದ ನೀಡದೆ ಪುಣ್ಯ ಸ್ನಾನ ಮಾಡಬೇಕು ಎಂದರು.