ಕರ್ನಾಟಕ

karnataka

By

Published : Sep 7, 2020, 4:53 PM IST

ETV Bharat / state

ಕೊರೊನಾ ಲಾಕ್​ಡೌನ್​ನಿಂದ ಸಾರಿಗೆ ಇಲಾಖೆಯ ಆದಾಯಕ್ಕೂ ಕತ್ತರಿ

ಕೊರೊನಾ ಲಾಕ್‌ಡೌನ್​ನಿಂದಾಗಿ ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಹೊಸ ವಾಹನಗಳ ನೋಂದಣಿ ಅತ್ಯಂತ ಕಡಿಮೆಯಾಗಿದ್ದು, ನಾಲ್ಕು ತಿಂಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

Transportation department revenues decline due to Corona lockdown
ಕೊರೊನಾ ಲಾಕ್​ಡೌನ್​ನಿಂದ ಸಾರಿಗೆ ಇಲಾಖೆಯ ಆದಾಯಕ್ಕೂ ಕತ್ತರಿ

ರಾಯಚೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆ, ರಾಯಚೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ ಅತ್ಯಂತ ಕಡಿಮೆಯಾಗಿದ್ದು, ಆದಾಯಕ್ಕೂ ಕತ್ತರಿ ಬಿದ್ದಿದೆ.

ಕೊರೊನಾ ಲಾಕ್​ಡೌನ್​ನಿಂದ ಸಾರಿಗೆ ಇಲಾಖೆಯ ಆದಾಯಕ್ಕೂ ಕತ್ತರಿ

ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಇಲಾಖೆಗಳ ಪೈಕಿ ಸಾರಿಗೆ ಇಲಾಖೆಯೂ ಒಂದು. ಹೊಸ ವಾಹನಗಳ ನೋಂದಣಿಯಿಂದ ಸಾರಿಗೆ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಈ ವರ್ಷ ಲಾಕ್​ಡೌನ್‌ನಿಂದಾಗಿ ಆಟೋಮೊಬೈಲ್ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದರಿಂದ ವಾಹನಗಳ ಮಾರಾಟ ಕಡಿಮೆಯಾಗಿ ಕಂಪನಿಗಳು ನಷ್ಟ ಹೊಂದಿದ್ದರೆ, ವಾಹನಗಳ ನೋಂದಣಿಯಿಲ್ಲದೆ ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಯ ನಾಲ್ಕು ತಿಂಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

2019-20ನೇ ಸಾಲಿನಲ್ಲಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಾಸಿಕ 5.58 ಕೋಟಿ ರೂಗಳ ಗುರಿಯನ್ನು ನೀಡಲಾಗಿತ್ತು. 2019ನೇ ಸಾಲಿನ ಏಪ್ರಿಲ್​​ನಲ್ಲಿ ಶೇ. 81.74, ಮೇ ತಿಂಗಳಲ್ಲಿ ಶೇ. 90.34, ಜೂನ್​ನಲ್ಲಿ ಶೇ. 97.17, ಜುಲೈನಲ್ಲಿ ಶೇ. 92.99ರಷ್ಟು ಗುರಿಯನ್ನು ಸಾಧಿಸಿದೆ. ಆದರೆ, 2020 ಸಾಲಿನಲ್ಲಿ ಕೊರೊನಾ ಕಾರಣದಿಂದಾಗಿ ಏಪ್ರಿಲ್​ನಲ್ಲಿ ಶೇ. 18.10, ಮೇ ತಿಂಗಳಲ್ಲಿ ಶೇ. 47.39, ಜೂನ್​ನಲ್ಲಿ ಶೇ. 85.45, ಜುಲೈನಲ್ಲಿ ಶೇ. 89.14ರಷ್ಟು ಗುರಿ ತಲುಪಿದೆ.

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿವರ್ಷ ಮಾಸಿಕ 2 ರಿಂದ 3 ಸಾವಿರ ವಾಹನಗಳು ನೋಂದಣಿಯಾಗುತ್ತಿದ್ದವು. ಆದರೆ ಈ ಬಾರಿ ಕೊರೊನಾ ಲಾಕ್​ಡೌನ್​ನಿಂದಾಗಿ 2020ರ ಏಪ್ರಿಲ್​ನಿಂದ ಜುಲೈವರೆಗೆ ಕೇವಲ 4,007 ದ್ವಿಚಕ್ರ ವಾಹನಗಳು, 240 ಕಾರು, 337 ಟ್ರ್ಯಾಕ್ಟರ್​ಗಳು ಮಾತ್ರ ನೋಂದಣಿಯಾಗಿವೆ. ಲಾರಿ, ಟಿಪ್ಪರ್ ಸೇರಿದಂತೆ ಬೃಹತ್ ವಾಹನಗಳ ನೋಂದಣಿ ಬೆರಳೆಣಿಕೆಯಷ್ಟು ಮಾತ್ರ ಆಗಿವೆ.

ABOUT THE AUTHOR

...view details