ರಾಯಚೂರು:ಜಿಲ್ಲೆಯ 6 ಜನರಲ್ಲಿ ಇಂದು ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರ ರಕ್ತ, ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಯಚೂರಿನ 6 ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ - ರಾಯಚೂರು ಸುದ್ದಿ
ಜಿಲ್ಲೆಯ 6 ಜನರಲ್ಲಿ ಇಂದು ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರ ರಕ್ತ, ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಯಚೂರಿನ 6 ಜನರ ಗಂಟಲು ದ್ರವ ಪ್ರಯೋಗಲಯಕ್ಕೆ ರವಾನೆ
ಜಿಲ್ಲೆಯಿಂದ ಇದುವರೆಗೂ ಒಟ್ಟು 20 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 9 ಮಾದರಿಗಳು ನೆಗೆಟಿವ್ ಬಂದಿದ್ದು, ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಭಾನುವಾರ 3 ಹಾಗೂ ಸೋಮವಾರ 6 ಜನರ ರಕ್ತದ ಮಾದರಿಗಳನ್ನ ತಪಾಸಣೆಗಾಗಿ ರವಾನಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸಿದ 174 ಜನರನ್ನು ಗುರುತಿಸಲಾಗಿದೆ.
ವಿದೇಶದಿಂದ ಬಂದವರೊಡನೆ ಸಂಪರ್ಕ ಹೊಂದಿದ್ದ 774 ಜನರ 14 ದಿನಗಳ ಹೋಂ ಕ್ವಾರಂಟೈನ್ ಅವಧಿ ಮುಗಿದಿದೆ. ಇನ್ನೂ 27 ಜನರ ಮೇಲೆ ನಿಗಾ ವಹಿಸಲಾಗಿದೆ.