ರಾಯಚೂರು:ನಗರದ ಶಕ್ತಿನಗರದಲ್ಲಿರುವ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್ಟಿಪಿಎಸ್) ದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾನೆ.
ರಾಯಚೂರು ಆರ್ಟಿಪಿಎಸ್ನಲ್ಲಿ ಬೆಲ್ಟ್ಗೆ ಸಿಲುಕಿ ಕಾರ್ಮಿಕ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಒಡಿಶಾ ಮೂಲದ ಕಾರ್ಮಿಕ ಸಾವು
ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮತ್ತೊಂದು ದುರಂತ ನಡೆದಿದೆ. ಬೆಲ್ಟ್ಗೆ ಸಿಲುಕಿ ಒಡಿಶಾ ಮೂಲದ ಕಾರ್ಮಿಕನೋರ್ವ ಸಾವಿಗೀಡಾಗಿದ್ದಾನೆ.

ಆರ್ಟಿಪಿಎಸ್ ಕಲ್ಲಿದ್ದಲು ಸಂಸ್ಕರಣಾ(ಕೂಲ್ ಯಾರ್ಡ್) ಘಟಕದಲ್ಲಿ ಈ ದುರ್ಘಟನೆ ಜರುಗಿದೆ. ಒಡಿಶಾ ಮೂಲದ ದೀಪಕ್ ನಾಯಕ(27) ಮೃತ ವ್ಯಕ್ತಿ. ಬೆಲ್ಟ್ನಿಂದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಾಗ, ಕಲ್ಲು ಕಂಡು ಬಂದ್ರೆ ಅವುಗಳನ್ನ ತೆಗೆಯುವ ಕೆಲಸವನ್ನು ದೀಪಕ್ ಮಾಡುತ್ತಿದ್ದರು. ಈ ವೇಳೆ ಬೆಲ್ಟ್ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು, ದೇಹ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ.
ಒಡಿಶಾ ಮೂಲದ ದೀಪಕ್ ಆರ್ಟಿಪಿಎಸ್ನಲ್ಲಿ ಕೆಲಸ ಮಾಡುವುದಕ್ಕೆ ಬಂದು, ಶಕ್ತಿನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.