ರಾಯಚೂರು :ವಿದ್ಯುತ್ ಕಂಬಗಳನ್ನು ಹಾಕಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ನ ಟ್ರಾಲಿ ಪಲ್ಟಿಯಾಗಿ ಓರ್ವ ಕೂಲಿ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ ರಾಯಚೂರಿನ ಬೀಜನಗೇರಾ ಗ್ರಾಮದಲ್ಲಿ ನಡೆದಿದೆ. ವೈ.ಮಲ್ಲಾಪುರ ಗ್ರಾಮದ ಕೂಲಿ ಕಾರ್ಮಿಕ ಪ್ರಾಣೇಶ(30) ಮೃತ ವ್ಯಕ್ತಿ. ಗಾಯಗೊಂಡ 6 ಮಂದಿಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
ಕೂಲಿ ಕಾರ್ಮಿಕರು ರಾಯಚೂರಿನಿಂದ ಬೀಜನಗೇರಾ ಕಡೆಗೆ ಟ್ರ್ಯಾಕ್ಟರ್ನಲ್ಲಿ ವಿದ್ಯುತ್ ಕಂಬಗಳನ್ನು ಹಾಕಿಕೊಂಡು ತೆರಳಿದ್ದರು. ಮಾರ್ಗಮಧ್ಯೆ ಟ್ರ್ಯಾಕ್ಟರ್ ರಸ್ತೆಯ ಬದಿಯ ತೆಗ್ಗಿನ ಕಡೆ ವಾಲಿದ ಪರಿಣಾಮ ಟ್ರಾಲಿ ಪಲ್ಟಿಯಾಗಿದೆ. ಟ್ರಾಲಿಯಲ್ಲಿದ್ದ ಕೂಲಿ ಕಾರ್ಮಿಕರ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ.