ರಾಯಚೂರು :4 ವರ್ಷದ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನರಗುಂಡ ಗ್ರಾಮದಲ್ಲಿ ನಡೆದಿದೆ.
ರಾಯಚೂರು: ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವು - ಬಾಲಕನ ಮೇಲೆ ಟ್ರಾಕ್ಟರ್ ಹರಿದು ಸಾವು
ರಾಯಚೂರಿನ ಗ್ರಾಮವೊಂದರಲ್ಲಿ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕ ಸಾವು
ಉದಯ(4) ಮೃತ ಬಾಲಕ ಎಂದು ಗುರುತಿಸಲಾಗಿದೆ. ಇಂದು ಬೆಳಗಿನ ಜಾವ ಬಾಲಕ ರಸ್ತೆ ದಾಟುವ ವೇಳೆ ಟ್ರ್ಯಾಕ್ಟರ್ ಬಾಲಕನ ಮೇಲೆ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.