ರಾಯಚೂರು: ಜಿಲ್ಲೆಯಲ್ಲಿ ಇಂದು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 575ಕ್ಕೆ ಏರಿಕೆಯಾಗಿದೆ.
ರಾಯಚೂರಿನಲ್ಲಿ ಇಂದು 6 ಜನರಿಗೆ ಕೊರೊನಾ - coronavirus safety
ಐಸೊಲೇಷನ್ ವಾರ್ಡ್‌ನಲ್ಲಿ 110 ಜನರಿಗೆ ಹಾಗೂ ಕ್ವಾರಂಟೈನ್‌ನಲ್ಲಿ 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ..
ರಾಯಚೂರಿನಲ್ಲಿ ಇಂದು 6 ಜನರಿಗೆ ಕೊರೊನಾ ಪಾಸಿಟಿವ್
ರಾಯಚೂರು ತಾಲೂಕಿನಲ್ಲಿ 3, ಮಾನ್ವಿ ತಾಲೂಕಿನಲ್ಲಿ 2 ಮತ್ತು ದೇವದುರ್ಗ ತಾಲೂಕಿನ ಒಬ್ಬರಲ್ಲಿ ಸೋಂಕು ಕಾಣಿಸಿದೆ. ಪ್ರಯೋಗಾಲಯದಿಂದ ಇನ್ನೂ 1,883 ಜನರ ವರದಿ ಬರುವುದು ಬಾಕಿಯಿದ್ದು, 147 ಕೊರೊನಾ ಸಕ್ರಿಯ ಪ್ರಕರಣಗಳಿವೆ.
ಐಸೊಲೇಷನ್ ವಾರ್ಡ್‌ನಲ್ಲಿ 110 ಜನರಿಗೆ ಹಾಗೂ ಕ್ವಾರಂಟೈನ್‌ನಲ್ಲಿ 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 422 ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.