ರಾಯಚೂರು: ಜಿಲ್ಲೆಯಿಂದ ಮಂಗಳವಾರ 12 ಕೊರೊನಾ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ರವಾನಿಸಲಾಗಿದೆ.
ರಾಯಚೂರಲ್ಲಿ ಕೊರೊನಾ ಭೀತಿ: 12 ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ - Corona Suspects
ರಾಯಚೂರು ಜಿಲ್ಲೆಯಲ್ಲೂ 12 ಮಂದಿ ಕೊರೊನಾ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಲ್ಯಾಬ್ಗೆ ಕಳಿಸಲಾಗಿದೆ.
ಗಂಟಲು ದ್ರವ ಪರೀಕ್ಷೆಗೆ ರವಾನೆ
ಸೋಮವಾರ ಕಳುಹಿಸಿದ್ದ 18 ಸೇರಿ 30 ಮಾದರಿಗಳ ಫಲಿತಾಂಶ ಬರುವುದು ಬಾಕಿ ಇದೆ. ಈವರೆಗೆ 95 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇದರಲ್ಲಿ 65 ಜನರ ವರದಿ ನೆಗೆಟಿವ್ ಬಂದಿದೆ. ಕ್ವಾರಂಟೈನ್ನಲ್ಲಿ 122 ಜನರನ್ನು ಇರಿಸಲಾಗಿದೆ.
ಜಿಲ್ಲೆಯಿಂದ ಇದುವರೆಗೆ ಬಂದಿರುವ ಮಾದರಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.