ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಈಜು... ಮುಳುಗುತ್ತಿದ್ದವನ ಉಳಿಸಲು ಹೋಗಿ ಮೂವರೂ ನೀರುಪಾಲು - undefined

ಈಜಲು ಹೋಗಿದ್ದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಚಂದ್ರಗುತ್ತಿ ಬಳಿಯ ಜೋಳದಗುಡ್ಡೆ ಗ್ರಾಮದಲ್ಲಿ ನಡೆದಿದೆ.

Shimoga

By

Published : Jul 21, 2019, 5:57 PM IST

ಶಿವಮೊಗ್ಗ:ಈಜಲು ಹೋಗಿದ್ದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸೊರಬ ತಾಲೂಕಿನ ಚಂದ್ರಗುತ್ತಿ ಬಳಿಯ ಜೋಳದಗುಡ್ಡೆ ಗ್ರಾಮದಲ್ಲಿ ನಡೆದಿದೆ.

ಶರತ್, ಪ್ರದೀಪ್ ಹಾಗೂ ಲೋಹಿತ್ ಮೃತ ಯುವಕರು.ಇವರಲ್ಲಿ ಒಬ್ಬ ಯುವಕ ಈಜಲು ಕೆರೆಗೆ ಹಾರಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ನೀರಿನಿಂದ ರಕ್ಷಿಸಲು ಹೋಗಿ ಉಳಿದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಸರಿ ಸುಮಾರು 17 ವರ್ಷದವರಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಅಗ್ನಿ ಶಾಮಕದಳದವರು ಆಗಮಿಸಿದ್ದು, ಶವಗಳನ್ನು‌ ಹೊರತೆಗೆದಿದ್ದಾರೆ.

ಸೊರಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details