ಕರ್ನಾಟಕ

karnataka

ETV Bharat / state

ಗಾಢ ನಿದ್ದೆಯಲ್ಲಿದ್ದವರ ಮೇಲೆ ಹರಿದ JCB: ಮೂವರ ದಾರುಣ ಸಾವು - ರಾಯಚೂರು

ಗಾಢ ನಿದ್ದೆಯಲ್ಲಿದ್ದವರ ಮೇಲೆ ಹರಿದ ಜೆಸಿಬಿ - ಸ್ಥಳದಲ್ಲೇ ಮೂವರ ದಾರುಣ ಸಾವು - ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಿಲವಂಜಿಯಲ್ಲಿ ಘಟನೆ.

Representative image
ಮೃತ ಕಾರ್ಮಿಕರು

By

Published : Jun 14, 2023, 10:35 AM IST

Updated : Jun 14, 2023, 10:57 AM IST

ರಾಯಚೂರು:ಜೆಸಿಬಿ ಹರಿದ ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನಪ್ಪಿರುವ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ತಡರಾತ್ರಿ ನಡೆದಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾಲು ದಾರಿಯಲ್ಲಿ ಮೂವರು ಮಲಗಿದ್ದ ವೇಳೆ ಜೆಸಿಬಿ ಹರಿದ ಪರಿಣಾಮ ದುರ್ಘಟನೆ ನಡೆದಿದೆ. ಮೃತರನ್ನು ಛತ್ತೀಸಗಢ ಮೂಲದ ವಿಷ್ಣು (26), ಶಿವರಾಮ್ (28) ಹಾಗೂ ಬಲರಾಮ್(30) ಎಂದು ಗುರುತಿಸಲಾಗಿದೆ.

ಗ್ರಾಮದ ಜಮೀನೊಂದಲ್ಲಿ ಬೋರ್​ವೆಲ್ ಕೊರೆಯಲು ಆಗಮಿಸಿದ್ದರು. ಬೋರ್‌ವೆಲ್ ಕೊರೆದ ನಂತರ ರಾತ್ರಿಯ ವೇಳೆ ಹೊಲದಲ್ಲಿನ ಕಾಲು ದಾರಿಯಲ್ಲಿ ಮೂವರು ಗಾಢ ನಿದ್ದೆಗೆ ಜಾರಿದ್ದರು. ಬೋರ್​ವೆಲ್ ಕೊರೆಸುತ್ತಿದ್ದರಿಂದ ರಸ್ತೆ ಆಗಿರಬಹುದೆಂದು ಕಾಲು ದಾರಿಯಲ್ಲಿ ಜೆಸಿಬಿ ತೆಗೆದುಕೊಂಡು ಬಂದಿದ್ದರ ಪರಿಣಾಮ ಮೂವರು ಮೇಲೆ ಜೆಸಿಬಿ ಹರಿದಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿಯನ್ನು ರವಾನಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ:boat capsizes: ನದಿಯಲ್ಲಿ ಮುಳುಗಿದ 300 ಜನರಿದ್ದ ದೋಣಿ: ನೂರಾರು ಮದುವೆ ಅತಿಥಿಗಳ ಸಾವು

ಐವರ ದುರ್ಮರಣ:ಒಡಿಶಾದ ಬೋಲಂಗೀರ್ ಜಿಲ್ಲೆಯ ಸಂಬಲ್‌ಪುರ - ಬೋಲಂಗೀರ್ ರಾಷ್ಟ್ರೀಯ ಹೆದ್ದಾರಿ-26ರ ಕ್ರಾಸಿಂಗ್ ಚೌಕದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳವಾರ ರಾತ್ರಿ 11.00 ಗಂಟೆ ಸುಮಾರಿಗೆ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಬೋಲಂಗೀರ್​ನ ನಿವಾಸಿ ಆತ್ಮಜ ನಾಯಕ್(25), ದೀಪ್ತಿ ಸಾಯಿ(35) ಆಕೆಯ ಮಗ ಅಂಜಿ ಸಾಯಿ(6), ಇಪ್ಸಿತಾ ಸಾಯಿ(26), ಆಕೆಯ ಮಗಳು ರಿಯಾ ಸಾಯಿ(6) ಎಂದು ಗುರುತಿಸಲಾಗಿದೆ. ಆರತಿ ನಾಯಕ್ ಮತ್ತು ರಸ್ಮಿತಾ ಸಾಯಿ ಎಂಬ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Accident.. ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಐವರ ದುರ್ಮರಣ

ನವದಂಪತಿ ಸಾವು: ಟ್ಯಾಂಕರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿದ್ದಾರೆ. ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಹೊನಮಲ್ಲ ಕಳೆದ ಮೇ 22 ರಂದು ಗಾಯತ್ರಿ ಅವರೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ 24 ದಿನಗಳಲ್ಲಿಯೇ ನವಜೋಡಿ ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ವಿಜಯಪುರ: ಬೈಕ್​ ಕ್ಯಾಂಟರ್​ ನಡುವೆ ಡಿಕ್ಕಿ ನವದಂಪತಿ ಸಾವು

Last Updated : Jun 14, 2023, 10:57 AM IST

ABOUT THE AUTHOR

...view details