ಕರ್ನಾಟಕ

karnataka

ETV Bharat / state

ಲಿಂಗಸುಗೂರಲ್ಲಿ ಮಳೆಯಿಂದ ಭಾರಿ ಪ್ರವಾಹ: ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರ ರಕ್ಷಣೆ - ನಡುಗಡ್ಡೆಯಲ್ಲಿ ಸಿಲುಕಿದ ರೈತರು

ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರನ್ನು ರಕ್ಷಿಸಲಾಗಿದೆ. ಕೃಷಿ ಕಾರ್ಯ ನಿಮಿತ್ತ ಜಮೀನಿಗೆ ತೆರಳಿದ್ದಾಗ ಮಳೆ ಹೆಚ್ಚಾದ ಹಿನ್ನೆಲೆ ಪ್ರವಾಹದ ನಡುವೆ ಸಿಲುಕುವಂತಾಗಿತ್ತು.

three-farmers-rescued-from-flood-in-raichur
ಪ್ರವಾಹದಲ್ಲಿ ಸಿಲುಕ್ಕಿದ್ದ ಮೂವರು ರೈತರ ರಕ್ಷಣೆ

By

Published : Jul 25, 2021, 8:05 AM IST

ಲಿಂಗಸುಗೂರು (ರಾಯಚೂರು):ಧಾರಾಕಾರ ಮಳೆಗೆ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರನ್ನು ಅಗ್ನಿಶಾಮಕ ದಳ, ಎನ್​​ಡಿಆರ್​ಎಫ್​​​ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಶನಿವಾರ ಮಧ್ಯಾಹ್ನದಂದು ಲಿಂಗಸುಗೂರು ತಾಲೂಕಿನ ತವದ ಗಡ್ಡಿ ಬಳಿಯ ಜಮೀನಿಗೆ ತೆರಳಿದ್ದ ರೈತರು ಪ್ರವಾಹದಲ್ಲಿ ಸಿಲುಕಿದ್ದರು.

ಪ್ರವಾಹದಲ್ಲಿ ಸಿಲುಕಿದ್ದ ಮೂವರು ರೈತರ ರಕ್ಷಣೆ

ಬಳಿಕ ಅಗ್ನಿಶಾಮದ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶನಿವಾರ ಮಧ್ಯರಾತ್ರಿ ವೇಳೆಗೆ ರೈತರಾದ ನಿರುಪಾದಿ, ಹುಲ್ಲಪ್ಪ, ದುರುಗಪ್ಪ ಎಂಬುವರನ್ನು ಸುರಕ್ಷಿತವಾಗಿ ವಾಪಸ್​ ಕರೆತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ರಾಹುಲ್ ಸಂಕನೂರ, ತಹಶೀಲ್ದಾರ್ ಚಾಮರಾಜ ಪಾಟೀಲ್​, ಮತ್ತು ಎನ್​​​ಡಿಆರ್​​​ಎಫ್ ತಂಡ ಭಾಗಿಯಾಗಿತ್ತು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಶನಿವಾರ ಮಧ್ಯಾಹ್ನವೇ ರೈತರು ನಡುಗಡ್ಡೆಯಲ್ಲಿ ಸಿಲುಕಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನವೇ ಮಾಹಿತಿ ನೀಡಿದ್ದರೂ ರಕ್ಷಣಾ ಕಾರ್ಯ ವಿಳಂಬ ಮಾಡಿದ್ದಾರೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದರು.

ABOUT THE AUTHOR

...view details