ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಭಾರಿ ಮಳೆಯಿಂದ ಘೋರ ದುರಂತ.. ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ಸಾವು - ಭಾರಿ ಮಳೆ

ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ಐದು ವರ್ಷದ ಬಾಲಕ ಸೇರಿದಂತೆ ಗಂಡ, ಹೆಂಡತಿ ಸಾವನ್ನಪ್ಪಿರುವ ಘಟನೆ ಮಾನವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.

three died
three died

By

Published : Oct 3, 2022, 9:59 AM IST

ರಾಯಚೂರು: ನಿರಂತರ ಮಳೆಯಿಂದ ತೇವಾಂಶಗೊಂಡ ಮನೆಯ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾನವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಸಂಭವಿಸಿದೆ. ಪರಮೇಶ್(45), ಜಯಮ್ಮ(39) ಹಾಗೂ ಭರತ್ (5) ಮೃತರು.

ಪರಮೇಶ್ ಹಾಗೂ ಜಯಮ್ಮ ದಂಪತಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕ ಭರತ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಮನೆ ಗೋಡೆ ಕುಸಿತ: ಅವಶೇಷಗಳಡಿ ಸಿಲುಕಿ ಒಡಹುಟ್ಟಿದ ನಾಲ್ವರು ಪುಟ್ಟ ಮಕ್ಕಳು ಬಲಿ!

ಮಗು ಸೇರಿದಂತೆ ಪತಿ ಹಾಗೂ ಪತ್ನಿ ರಾತ್ರಿ ಊಟ ಮಾಡಿ ಮಲಗಿದ್ದರು. ನಿರಂತರವಾಗಿ ಸುರಿದ ಮಳೆಯಿಂದ ತೇವಾಂಶಗೊಂಡ ಮನೆಯ ಗೋಡೆ ಬೆಳಗಿನ ಜಾವ ಕುಸಿದು ಬಿದ್ದಿದೆ. ಈ ಕುರಿತು ಸ್ಥಳಕ್ಕೆ ಮಾನವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details