ಕರ್ನಾಟಕ

karnataka

ETV Bharat / state

ರಾಯಚೂರು: ಮೂವರು ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ - ಸೋಂಕಿತ ಶಂಕಿತರು ಪತ್ತೆ

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಭೀತಿ ಮುಂದುವರೆದಿದ್ದು, ಇಂದು ಮತ್ತೆ ಮೂವರು ಕೊರೊನಾ ಶಂಕಿತರು ಪತ್ತೆಯಾಗಿದ್ದಾರೆ. ಅವರ ಗಂಟಲು ದ್ರವ, ರಕ್ತ ಮಾದರಿಯನ್ನು ಪರೀಕ್ಷೆಗೆಂದು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

three corona suspects in raichuru district
ಇಂದು ಮೂವರು ಕೊರೊನಾ ಸೋಂಕಿತ ಶಂಕಿತರು ಪತ್ತೆ

By

Published : Apr 8, 2020, 9:36 PM IST

ರಾಯಚೂರು: ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಶಂಕಿತ ವ್ಯಕ್ತಿಗಳು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಇಂದು ಮೂವರು ಕೊರೊನಾ ಶಂಕಿತರು ಪತ್ತೆ

ಶಂಕಿತರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಲಾಗಿದ್ದ ಮೂವರ ವರದಿ ನೆಗೆಟಿವ್ ಬಂದಿದೆ.

ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 44 ಶಂಕಿತರ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅದರಲ್ಲಿ 14 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ 30 ಶಂಕಿತರ ಮಾದರಿಯ ತಪಾಸಣೆ ವರದಿ ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಇದುವರೆಗೂ ವಿದೇಶಕ್ಕೆ ಹೋಗಿ ಬಂದ 174 ಜನರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದ 774 ಜನರಿಗೆ ಹೋಮ್​ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಅವರ 14 ದಿನಗಳ ಅವಧಿ ಪೂರ್ಣಗೊಂಡಿದೆ. ಬುಧವಾರ ಸರಕಾರಿ ಕಟ್ಟಡದಲ್ಲಿ ಇಬ್ಬರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಸರಕಾರಿ ಕ್ವಾರಂಟೈನ್​​​ನಲ್ಲಿ ಒಟ್ಟು 50 ಜನರನ್ನ ಇರಿಸಲಾಗಿದೆ.

ABOUT THE AUTHOR

...view details