ಲಿಂಗಸುಗೂರು(ರಾಯಚೂರು):ಇಂದು ತಾಲೂಕಿನಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ತಾಲೂಕಿನ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಹಾಗೂ ಉಪ್ಪಾರ ನಂದಿಹಾಳದ ಇಬ್ಬರು ಕೂಲಿ ಕಾರ್ಮಿಕರು ಸೇರಿದಂತೆ ಮೂವರಿಗೆ ಸೋಂಕು ತಗುಲಿದೆ.
ಸೋಂಕು ತಗುಲಿದ್ದ ಕಾರ್ಮಿಕನ ಸಂಪರ್ಕದಲ್ಲಿದ್ದ ಮತ್ತೊಬ್ಬ ಕಾರ್ಮಿಕನಿಗೆ ಹಾಗೂ ಮಹಾರಾಷ್ಟ್ರದಿಂದ ವಾಪಸ್ಸಾಗಿ ಹೋಮ್ ಕ್ವಾರಂಟೈನ್ ನಲ್ಲಿದ್ದ ಉಪ್ಪಾರನಂದಿಹಾಳ ಗ್ರಾಮದ ಅತ್ತೆ- ಸೊಸೆಗೆ (ಕೂಲಿ ಕಾರ್ಮಿಕರು) ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಮೂವರನ್ನು ರಾಯಚೂರು ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ.