ರಾಯಚೂರು: ತಾಲೂಕಿನ ಕಟ್ಲಟ್ಕೂರು ಗ್ರಾಮದ ಕೆರೆಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿವೆ. ಸಮಾರು 300 ಎಕರೆಯಷ್ಟು ವಿಶಾಲವಾದ ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆಗಾಗಿ ಲಕ್ಷಾಂತರ ಮರಿ ಮೀನುಗಳನ್ನು ಬಿಡಲಾಗಿತ್ತು.
ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು: ಮೀನಿನ ಮರಿಗಳ ಮಾರಣಹೋಮ - Sterilizing spray for the lake
ಇತ್ತೀಚಿಗೆ ಸುರಿದ ಮಳೆಗೆ ಕೆರೆ ಭರ್ತಿಯಾಗಿತ್ತಲ್ಲದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೀನಿನ ಮರಿಗಳನ್ನು ಬಿಡಲಾಗಿತ್ತು. ಆದರೆ ತಡರಾತ್ರಿ ಕಿಡಿಗೇಡಿಗಳು ಕೆರೆಗೆ ಕೀಟನಾಶಕ ಸಿಂಪಡಿಸಿದ್ದು, ಕೆರೆಯಲ್ಲಿದ್ದ ಮೀನಿನ ಮರಿಗಳು ಸಾವನ್ನಪ್ಪಿವೆ.
ಕೆರೆಗೆ ಕೀಟನಾಶಕ ಸಿಂಪಡಿಸಿದ ಕಿಡಿಗೇಡಿಗಳು: ಮೀನಿನ ಮರಿಗಳ ಮಾರಣಹೋಮ
ಗುರುವಾರ ತಡರಾತ್ರಿ ಕೆರೆಗೆ ದುಷ್ಕರ್ಮಿಗಳು ಕ್ರಿಮಿನಾಶಕ ಸಿಂಪಡಿಸಿರುವ ಶಂಕೆ ಇದ್ದು, ಬೆಳಗ್ಗೆ ಕೆರೆ ಬಳಿ ದರ್ವಾಸನೆ ಬರುತ್ತಿತ್ತು. ಬಳಿಕ ಗ್ರಾಮಸ್ಥರು ಕೆರೆ ಬಳಿ ಗಮನಿಸಿದಾಗ ಮೀನಿನ ಮರಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಇತ್ತೀಚಿಗೆ ಸುರಿದ ಮಳೆಗೆ ಕೆರೆ ಭರ್ತಿಯಾಗಿದ್ದರಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೀನಿನ ಮರಿಗಳನ್ನು ಬಿಡಲಾಗಿತ್ತು. ಈ ಘಟನೆ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ಮೀನು ಸಾಕಾಣಿಕೆಗಾರರಿಗೆ ನಷ್ಟವನ್ನು ಭರಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.