ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಕಡಿಮೆಯಾದ ನೀರಿನ ಪ್ರಮಾಣ: ಸಾವಿರಾರು ಮೀನುಗಳ ಮಾರಣಹೋಮ - Thousands of dead fishes floating in lake

ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಪರಿಣಾಮ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಹೀಗಾಗಿ, ಕೆರೆ ಗಬ್ಬೆದ್ದು ನಾರುತ್ತಿದೆ.

fishes dead
ಮೀನುಗಳ ಮಾರಣಹೋಮ

By

Published : May 12, 2020, 12:52 PM IST

ರಾಯಚೂರು: ನಗರದ ಮಾವಿನಕರೆಯಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿದ್ದು, ಸುತ್ತಮುತ್ತಲಿನ ಪರಿಸರ ದುರ್ವಾಸನೆ ಬೀರುತ್ತಿದೆ.

ಬೇಸಿಗೆ ಬಿಸಿಲು ಪ್ರಾರಂಭವಾಗುತ್ತಿದ್ದಂತೆ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಆಮ್ಲಜನಕ ಕೊರತೆ ಉಂಟಾದ ಪರಿಣಾಮ ಮೀನುಗಳು ಮೃತಪಟ್ಟಿವೆ.

ಕೆರೆಯ ಸುತ್ತಮುತ್ತ ಹಾದು ಹೋಗುವಾಗ ದುರ್ವಾಸನೆ ಮೂಗಿಗೆ ಬಡಿಯುತ್ತಿದ್ದು, ವಾಂತಿ ಬರುವಂತಾಗುತ್ತದೆ. ಅಲ್ಲಿನ ಜನರಿಗೆ ಸಾಂಕ್ರಾಮಿಕ ರೋಗದ ಭೀತಿಯನ್ನುಂಟು ಮಾಡಿದೆ.

ನಗರಸ ಸಭೆ ಸದಸ್ಯ ರಮೇಶ್​​​

ಕೆರೆಯ ಪಕ್ಕದಲ್ಲೇ ಉದ್ಯಾನವಿದೆ. ಕೆರೆ ಗಬ್ಬೆದ್ದು ನಾರುತ್ತಿರುವ ಪರಿಣಾಮ ಇಲ್ಲಿಗೆ ಬರುವ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗಿದೆ. ಕೆರೆಯಲ್ಲಿ ಇದೇ ಮೊದಲೇನಲ್ಲ, ಅನೇಕ ಬಾರಿ ಮೀನುಗಳ ಮಾರಣ ಹೋಮವಾಗಿದೆ.

ಉದ್ಯಾನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ಬಂದಿದೆ. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು ಎನ್ನುತ್ತಾರೆ ನಗರಸಭೆ ಸದಸ್ಯರು.

ABOUT THE AUTHOR

...view details