ರಾಯಚೂರು: ಜಿಲ್ಲೆಯಾದ್ಯಂತ ಈಗಿರುವ ಸಾಂಸ್ಥಿಕ ಕ್ವಾರಂಟೈನ್ಗಳನ್ನು ಬಂದ್ ಮಾಡಿ, ಹೋಮ್ಕ್ವಾರಂಟೈನ್ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.
ರಾಯಚೂರಿನಲ್ಲಿ ಹೋಮ್ ಕ್ವಾರಂಟೈನ್ಗೆ ಆದ್ಯತೆ ನೀಡಲು ಚಿಂತನೆ: ಹೆಚ್ಚುವರಿ ಎಸ್ಪಿ - Raichur corona news
ರಾಯಚೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ಗಳನ್ನು ಬಂದ್ ಮಾಡಿ, ಹೋಮ್ ಕ್ವಾರಂಟೈನ್ಗೆ ಆದ್ಯತೆ ನೀಡುವ ಚಿಂತನೆ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದ್ರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು
ಮಂಗಳವಾರ ಲಿಂಗಸುಗೂರು ಕಂಟೈನ್ಮೆಂಟ್ ಝೋನ್ಗೆ ಭೇಟಿ ನೀಡಿ ಪರಿಶೀಲನೆ ನಂತರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ವೀಕ್ಷಣ ತಂಡಗಳ ರಚನೆ ಮಾಡಲು ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಹಾಗೂ ಕೋವಿಡ್-19 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಕೂಡ ಭವಿಷ್ಯದಲ್ಲಿ ಹೋಮ್ಕ್ವಾರಂಟೈನ್ ಮಾಡಲಾಗುವುದು ಎಂದರು.
Last Updated : Jun 9, 2020, 10:53 PM IST