ಕರ್ನಾಟಕ

karnataka

ETV Bharat / state

ಜನರ ಜೀವ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದವರು ಇವರು....! - NDRF team came to devalingasuguru

ಉತ್ತರ ಕರ್ನಾಟಕದ ಕೆಲ ಭಾಗ ಪ್ರವಾಹಕ್ಕೆ ತುತ್ತಾಗಿದ್ದು, ಜನರ ಜೀವ ರಕ್ಷಣೆಗೆಂದು ಎನ್​ಡಿಆರ್​ಎಫ್​ ತಂಡ ದೇವಸೂಗೂರಿಗೆ ಆಗಮಿಸಿ ಕಾರ್ಯ ನಿರ್ವಹಿಸುತ್ತಿದೆ.

ದೇವಸೂಗುರಿಗೆ ಆಗಮಿಸಿದ ಎನ್​ಡಿಆರ್​ಎಫ್​ ತಂಡ

By

Published : Aug 6, 2019, 9:06 PM IST

ರಾಯಚೂರು:ಕೃಷ್ಣಾ ನದಿಯಿಂದ ನೀರು ಯಥೇಚ್ಛವಾಗಿ ಹರಿಯುತ್ತಿರುವ ಕಾರಣ ಜನರ ರಕ್ಷಣೆಗೆ ಸನ್ನದ್ಧರಾಗಿರುವ ಎನ್​ಡಿಆರ್​ಎಫ್​ ತಂಡ ರಾಯಚೂರು ತಾಲೂಕಿನ ಶಕ್ತಿನಗರ ಬಳಿಯ ದೇವಸೂಗೂರಿನಲ್ಲಿ ಬೀಡು ಬಿಟ್ಟಿದೆ.

ದೇವಸೂಗುರಿಗೆ ಆಗಮಿಸಿದ ಎನ್​ಡಿಆರ್​ಎಫ್​ ತಂಡ

ದೇವಸೂಗೂರಿನಲ್ಲಿ ಬಂದಿಳಿದ ಎನ್​ಡಿಆರ್​ಎಫ್​ ತಂಡ, ಜಾಕೆಟ್, ಸೇಫ್ಟಿ ಕಿಟ್ ನೊಂದಿಗೆ ಪ್ರವಾಹ ಭೀತಿಯಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಜನರ ರಕ್ಷಣೆಗೆ ಮುಂದಾಗಿದೆ. ಕೃಷ್ಣಾ ನದಿಗೆ ಇಂದೂ ಸಹ ನೀರು ಬಿಟ್ಟ ಪರಿಣಾಮ ತಾಲೂಕಿನ ಜನರು ಹಾಗೂ ನದಿ ತೀರದ ಗ್ರಾಮಸ್ಥರ ನೆರವಿಗೆ ಧಾವಿಸುವ ಮೂಲಕ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details