ಕರ್ನಾಟಕ

karnataka

By

Published : Jun 25, 2020, 1:15 PM IST

ETV Bharat / state

ಹಳೆ ಥರ್ಮಲ್ ಸ್ಕ್ಯಾನರ್ ತಂದಿಟ್ಟ ಅವಾಂತರ; ಹೊಸ ಸ್ಕ್ಯಾನರ್‌ನಿಂದ ಆತಂಕ ದೂರ

ಹಳೆ ಥರ್ಮಲ್​ ಸ್ಕ್ಯಾನರ್​ ಬಳಸಿದ ಪರಿಣಾಮ ವಿದ್ಯಾರ್ಥಿಗಳು ಆತಂಕಕ್ಕೀಡಾದ ಘಟನೆ ರಾಯಚೂರು ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ.

Thermal scanner problem
ಥರ್ಮಲ್​ ಸ್ಕ್ಯಾನರ್​​ ಎಡವಟ್ಟು

ರಾಯಚೂರು:ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡುವ ಥರ್ಮಲ್ ಸ್ಕ್ಯಾನಿಂಗ್ ಕೈಕೊಡುವ ಮೂಲಕ ಆತಂಕಕ್ಕೆ ಅವಕಾಶ ಮಾಡಿಕೊಟ್ಟಿತು.

ತಪಾಸಣೆ ನಡೆಸುವ ವೇಳೆ ಥರ್ಮಲ್ ಸ್ಕ್ಯಾನರ್‌ನಲ್ಲಿ ಕೆಂಪು ಬಣ್ಣ ಕಾಣಿಸಿಕೊಂಡಿತು. ಹೀಗಾಗಿ ವಿದ್ಯಾರ್ಥಿಗಳಿಗೆ ಕೊರೊನಾ ಇದೆಯೇನೋ ಎಂದು ಕೆಲ ವಿದ್ಯಾರ್ಥಿಗಳಲ್ಲಿ ಭಯ ಆವರಿಸಿತ್ತು. ಬಳಿಕ ಆ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಸುಮಾರು 15 ನಿಮಿಷಗಳ ಕಾಲ ನಿಲ್ಲಿಸಲಾಯಿತು.

ಹಳೆಯ ಸ್ಕ್ಯಾನರ್ ಬಳಕೆ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು.

ಅದಾದ ಬಳಿಕ ಮತ್ತೊಂದು ಹೊಸ ಥರ್ಮಲ್ ಸ್ಕ್ಯಾನರ್​​​ನಲ್ಲಿ ತಪಾಸಣೆ ಮಾಡಿದಾಗ ಹಸಿರು ಕಾಣಿಸಿದೆ. ಆಗ ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರದೊಳಗೆ ಕಳುಹಿಸಲಾಯಿತು. ಹಳೆ ಥರ್ಮಲ್ ಸ್ಕ್ಯಾನರ್​​​ ಬಳಕೆ ಈ ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ABOUT THE AUTHOR

...view details