ರಾಯಚೂರು : ಕಳೆದ ಶನಿವಾರ ರಾತ್ರಿಯಿಂದ ಸುರಿದ ಮಳೆಯಿಂದ ರಾಯರ ದರ್ಶನಕ್ಕೆ ಯಾವುದೇ ತೊಂದರೆಯಿಲ್ಲ. ಭಕ್ತರು ಎಂದಿನಂತೆ ಬಂದು ರಾಯರ ದರ್ಶನ ಪಡೆಯಬಹುದೆಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ಪ್ರಕಟಣೆ ಹೊರಡಿಸಲಾಗಿದೆ.
ರಾಯರ ಭಕ್ತರಿಗೆ ಸಿಹಿ ಸುದ್ದಿ.. ರಾಘವೇಂದ್ರ ಸ್ವಾಮಿ ದರ್ಶನಕ್ಕಿಲ್ಲ ಸಮಸ್ಯೆ - mantralaya
ಕಳೆದ ಜೂ.26, 27 ರಂದು ಸುರಿದ ಮಳೆಯಿಂದಾಗಿ ಮಂತ್ರಾಲಯದ ಸುತ್ತಮುತ್ತಲಿನ ಹಳ್ಳ-ಕೊಳ್ಳುಗಳು ತುಂಬಿದ್ದು, ಇದರಿಂದ ಕೆಲವು ಕಟ್ಟಡಗಳು ಹಾಗೂ ಕೆಲವೊಂದು ಬಡಾವಣೆಗಳಿಗೆ ನೀರು ನುಗ್ಗಿತ್ತು. ಆದ್ರೆ ಮಠಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಇಲ್ಲವೆಂದು ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ಪ್ರಕಟಣೆ
ಕಳೆದ ಜೂ.26, 27 ರಂದು ಸುರಿದ ಮಳೆಯಿಂದಾಗಿ ಮಂತ್ರಾಲಯದ ಸುತ್ತಮುತ್ತಲಿನ ಹಳ್ಳ-ಕೊಳ್ಳುಗಳು ತುಂಬಿದ್ದು, ಇದರಿಂದ ಕೆಲವು ಕಟ್ಟಡಗಳು ಹಾಗೂ ಕೆಲವೊಂದು ಬಡಾವಣೆಗಳಿಗೆ ನೀರು ನುಗ್ಗಿವೆ. ಆದರೆ ಇದರಿಂದ ಶ್ರೀರಾಘವೇಂದ್ರ ಸ್ವಾಮಿಯವರ ಮೂಲ ದರ್ಶನಕ್ಕೆ ಯಾವುದೇ ಅಡಚಣೆಯಿಲ್ಲ. ಬಸ್ ಸಂಚಾರ ಎಂದಿನಂತೆ ಸಾಗಿದ್ದು, ಭಕ್ತರು ಶ್ರೀಮಠಕ್ಕೆ ಬಂದು ರಾಯರ ದರ್ಶನ ಪಡೆಯಬಹುದಾಗಿದೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ಶ್ರೀಮಠd ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ : ಮಳೆಯಾರ್ಭಟಕ್ಕೆ ನಲುಗಿದ ಮಂತ್ರಾಲಯ.. ಭಕ್ತರು ಸೇರಿದಂತೆ ರಾಯಚೂರು ಜನತೆಯಲ್ಲಿ ಆತಂಕ!