ರಾಯಚೂರು :ಲಾಕ್‌ಡೌನ್ ಹಿನ್ನೆಲೆ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆಗೆ ಆದೇಶ ಮಾಡಿದೆ. ಆದ್ರೆ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ನಿಯಮದಂತೆ ತೂಕ ಮಾಡಿ ಪಡಿತರ ವಿತರಣೆ ಮಾಡುವ ಬದಲು ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಳತೆಯಿಲ್ಲ, ತೂಕವಿಲ್ಲ...ನ್ಯಾಯಬೆಲೆ ಅಂಗಡಿಯಲ್ಲೇ ನಡೀತಿದೆಯಂತೆ ಮಹಾ ಮೋಸ!! - ಲಾಕ್‌ಡೌನ್ ಹಿನ್ನೆಲೆ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆಗೆ ಆದೇಶ
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಎನ್.ಹೂಸೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾಬಿಟ್ಟಿ ತೂಕ ಮಾಡುತ್ತಿದ್ದು, ಅಳತೆ ಮಾಡದೇ ಬಕೆಟ್ ಮೂಲಕ ಪಡಿತರ ಅಕ್ಕಿ, ಗೋಧಿಯನ್ನ ವಿತರಣೆ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿದೆ ಎನ್ನಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾಬಿಟ್ಟಿ ತೂಕ
ಜಿಲ್ಲೆಯ ಸಿರವಾರ ತಾಲೂಕಿನ ಎನ್.ಹೂಸೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾಬಿಟ್ಟಿ ತೂಕ ಮಾಡುತ್ತಿದ್ದು, ಅಳತೆ ಮಾಡದೇ ಬಕೆಟ್ ಮೂಲಕ ಪಡಿತರ ಅಕ್ಕಿ, ಗೋಧಿಯನ್ನ ವಿತರಣೆ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದ್ರೆ, ಬೇಕಿದ್ದರೆ ತೆಗೆದುಕೊಂಡಿ ಹೋಗಿ ಎಂದು ಸಬೂಬು ನೀಡುತ್ತಿದ್ದು, ಹೀಗಾಗಿ ಸಾರ್ವಜನಿಕರು ಕಣ್ಮುಂದೆ ಅನ್ಯಾಯವಾದರೂ ವಿಧಿಯಿಲ್ಲದೇ ಪಡಿತರವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ.