ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಎಮರ್ಜೆನ್ಸಿ ಆಡಳಿತವಿದೆ... ಬಿಜೆಪಿ ವಿರುದ್ಧ ಕಿಡಿ ಕಾರಿದ ಆರ್.ಬಿ.ತಿಮ್ಮಾಪುರ - Former Minister RB Thimmapura

ಯಾರೂ ಬಿಜೆಪಿ ಅನ್ನೋದಿಲ್ಲ ಅವರನ್ನು ಬಂಧಿಸಿ ಒಳ ಹಾಕುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದ್ದು, ರಾಜ್ಯದಲ್ಲಿ ಎಮರ್ಜೆನ್ಸಿ ಆಡಳಿತವಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಎಮರ್ಜೆನ್ಸಿ ಆಡಳಿತವಿದೆ...ಬಿಜೆಪಿ ವಿರುದ್ಧ ಕಿಡಿ ಕಾರಿದ ಆರ್.ಬಿ.ತಿಮ್ಮಾಪುರ

By

Published : Sep 6, 2019, 5:35 PM IST


ರಾಯಚೂರು:ಯಾರೂ ಬಿಜೆಪಿ ಅನ್ನೋದಿಲ್ಲ ಅವರನ್ನು ಬಂಧಿಸಿ ಒಳ ಹಾಕುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದ್ದು, ರಾಜ್ಯದಲ್ಲಿ ಎಮರ್ಜೆನ್ಸಿ ಆಡಳಿತವಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಎಮರ್ಜೆನ್ಸಿ ಆಡಳಿತವಿದೆ...ಬಿಜೆಪಿ ವಿರುದ್ಧ ಕಿಡಿ ಕಾರಿದ ಆರ್.ಬಿ.ತಿಮ್ಮಾಪುರ

ರಾಯಚೂರು ಜಿಲ್ಲಾ ಕಾಂಗ್ರೆಸ್ ಹೊಸ ಅಧ್ಯಕ್ಷ ನೇಮಕ ವಿಚಾರಕ್ಕೆ ಕುರಿತಂತೆ ಜಿಲ್ಲೆಯ ಮುಖಂಡರ ಹಾಗೂ ಕಾರ್ಯಕರ್ತರ ಭೇಟಿ ಮಾಡಲು ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬಿಜೆಪಿ ಅನ್ನೊದಿಲ್ಲ ಅವರನ್ನು ಬಂಧಿಸಿ ಒಳ ಹಾಕುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್​ನಲ್ಲಿ ಯಾರು ಬಲಿಷ್ಠ ನಾಯಕರಿದ್ದಾರೆ ಎಂದು ನೋಡಿ, ಅವರನ್ನ ಯಾವುದಾದ್ರು ಪ್ರಕರಣದಲ್ಲಿ ಸಿಲುಕಿಸಿ ಕಾಂಗ್ರೆಸ್ ಮುಗಿಸುವ ಹುನ್ನಾರ ನಡೆದಿದೆ. ಆದ್ರೆ, ಇವರ ನೀತಿ ಬಹಳ ದಿನಗಳ ಕಾಲ ನಡೆಯೋದಿಲ್ಲ. ಕಾಂಗ್ರೆಸ್ ಗೆ ನೂರಾರು ವರ್ಷದ ಇತಿಹಾಸವಿದ್ದು, ಇಂದಲ್ಲ ನಾಳೆ ಕಾಂಗ್ರೆಸ್ ಜನರು ಎದ್ದೇಳುತ್ತಾರೆ. ಅಲ್ಲಿಗೆ ಇವರ ಕಥೆ ಅಂತ್ಯವಾಗಲಿದೆ ಎಂದರು.

ಇನ್ನು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಅಧಿಕಾರಿಗಳಿಗೆ ರಾಜಕೀಯದಿಂದ ಒತ್ತಡ ಹೆಚ್ಚಾಗುತ್ತಿದೆ. ಅಧಿಕಾರಿಗಳಿಗೆ ಕಾನುನೂ ಬಾಹಿರ ಚಟುವಟಿಕೆಗಳನ್ನ ಮಾಡುವಂತೆ ಒತ್ತಡವನ್ನ ಹೇರುತ್ತಿದ್ದಾರೆ ಎಂದು ದೂರಿದ್ರು.

ABOUT THE AUTHOR

...view details