ಕರ್ನಾಟಕ

karnataka

ಪ್ರೇಯಸಿ ಭೇಟಿ ವೇಳೆ ಆಕೆಯ ಅಣ್ಣ, ಸ್ನೇಹಿತರಿಂದ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ

By

Published : Feb 12, 2023, 12:12 PM IST

ಯುವತಿಯು ತನ್ನ ಪ್ರಿಯಕರನನ್ನು ಕಾಣಲು ಬಂದಿದ್ದಳು. ಆಕೆಯ ಅಣ್ಣ ಮತ್ತು ಸ್ನೇಹಿತರು ಹಿಂಬಾಲಿಸಿಕೊಂಡು ಬಂದು ಯುವಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

raichur
ಮಾರಣಾಂತಿಕ ಹಲ್ಲೆ

ರಾಯಚೂರು:ಯುವತಿಯೊಬ್ಬಳ ವಿಚಾರವಾಗಿ ಏಳರಿಂದ ಎಂಟು ಜನ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ. ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ತಂಡವೊಂದು ಯುವಕನಿಗೆ ಮನಬಂದತೆ ಥಳಿಸಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ತಲೆಗೆ ಭಾರಿ ಪೆಟ್ಟು ಬಿದ್ದಿದೆ.

ಕೂಡಲೇ ಘಟನೆಯ ವಿಚಾರವನ್ನು ಸ್ಥಳೀಯರು ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಯುವಕನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಯಚೂರು ಜಿಲ್ಲೆಯ ನೇತಾಜಿ ನಗರದ ನಿವಾಸಿ ಮೆಹಬೂಬ್ ಹಲ್ಲೆಗೊಳಾದ ಯುವಕನೆಂದು ಗುರುತಿಸಲಾಗಿದೆ. ಆತ ಯಾವುದೇ ದೂರು ನೀಡದೆ ಚಿಕಿತ್ಸೆ ಪಡೆದುಕೊಂಡು ವಾಪಸ್ ಮನೆಗೆ ಮರಳಿದ್ದಾನೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ: ಮೆಹಬೂಬ್ ಕಳೆದ ಐದಾರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಗೆ ಕೋಚಿಂಗ್ ಕ್ಲಾಸ್​ಗೆಂದು ತೆರಳಿದ್ದನು. ಅಲ್ಲಿ ಆತನಿಗೆ ಬಾಗಲಕೋಟೆ ಮೂಲದ ಯುವತಿ ಪರಿಚಯವಾಗಿದ್ದಾಳೆ. ಬಳಿಕ ಅವರಿಬ್ಬರ ಸ್ನೇಹ ದಿನಗಳು ಕಳೆದಂತೆ ಪ್ರೀತಿಯಾಗಿ ಮಾರ್ಪಟ್ಟಿದೆ. ಅಷ್ಟರಲ್ಲಿಯೇ ಅವರಿಬ್ಬರ ಕೋಚಿಂಗ್​ ತರಬೇತಿ ಮುಗಿದಿದ್ದು, ತಮ್ಮ ಊರಿಗೆ ಮರಳಿದ್ದಾರೆ. ಆದರೆ ಇಬ್ಬರು ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದರು.

ಇದನ್ನೂ ಓದಿ:ಗೂಗಲ್​​ ಸಹಾಯದಿಂದ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ.. ಇತಿಹಾಸ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!

ಶನಿವಾರ ಯುವತಿ ತನ್ನ ಹುಡುಗನಿಗಾಗಿ ಬಾಗಲಕೋಟೆಯಿಂದ ಲಿಂಗಸೂಗೂರುವರೆಗೂ ಬಂದಿದ್ದಾಳೆ. ಇತ್ತ ಯುವಕನು ಸಹ ರಾಯಚೂರಿನಿಂದ ಲಿಂಗಸೂಗೂರಿಗೆ ಹೋಗಿದ್ದಾನೆ. ಇಬ್ಬರು ಅಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಯುವತಿಯ ಅಣ್ಣ ಮತ್ತು ಸ್ನೇಹಿತರು ಆಕೆಯನ್ನು ಹಿಂಬಾಲಿಸಿ ಬಂದಿದ್ದು, ಇಬ್ಬರು ಸಿಕ್ಕ ವೇಳೆ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆಯ ಬಳಿಕ ಮನೆಗೆ ಮರಳಿರುವ ಮೆಹಬೂಬ್​ ಹಲ್ಲೆ ಕುರಿತಂತೆ ಯಾವುದೇ ದೂರು ದಾಖಲಿಸಿಲ್ಲ. ಇತ್ತ ಹಲ್ಲೆ ನಡೆಸಿದ ಯುವತಿಯ ಅಣ್ಣ ಮತ್ತು ಆತನ ಸ್ನೇಹಿತರು ತಂಗಿಯನ್ನು ಕರೆದುಕೊಂಡು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಲಿಂಗಸೂಗೂರು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ನಡೆದಿರುವುದು ನಿಜ. ಆದರೆ ಹಲ್ಲೆಗೊಳದಾದ ಯುವಕ ದೂರು ನೀಡಲು ಹಿಂದೇಟು ಹಾಕಿದ್ದಾನೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆತ ತನ್ನ ಊರಿಗೆ ಹೋಗಿದ್ದಾನೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:50 ಲೀ.ಟ್ಯಾಂಕ್ ಸಾಮರ್ಥ್ಯದ ಕಾರಿಗೆ 57 ಲೀ. ಪೆಟ್ರೋಲ್ ಬಿಲ್ ನೀಡಿ ವಂಚನೆ ಆರೋಪ: ಪೆಟ್ರೋಲ್ ಬಂಕ್​​ ಸೀಲ್

ABOUT THE AUTHOR

...view details