ರಾಯಚೂರು: ಜಾನೆಕಲ್ ಗ್ರಾಮ ಪಂಚಾಯತಿಯಿಂದ ಅಕ್ರಮವಾಗಿ ನೇಮಕಾತಿಯಾಗಿರುವ ಕರ ವಸೂಲಿಗಾರ ನೇಮಕಾತಿಯನ್ನ ರದ್ದುಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಕ್ರಮವಾಗಿ ನೇಮಕಾತಿಯಾಗಿರುವ ಕರ ವಸೂಲಿಗಾರನನ್ನ ವಜಾಗೊಳಿಸಲು ಆಗ್ರಹ - The villagers demand the dismissal of illegal recruiters
ಜಾನೆಕಲ್ ಗ್ರಾಮ ಪಂಚಾಯತಿಯಿಂದ ಅಕ್ರಮವಾಗಿ ನೇಮಕಾತಿಯಾಗಿರುವ ಕರ ವಸೂಲಿಗಾರ ನೇಮಕಾತಿಯನ್ನ ರದ್ದುಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಾನೆಕಲ್ ಗ್ರಾಮ ಪಂಚಾಯಿತಿಯಲ್ಲಿ ಖಾಲಿಯಿದ್ದ ಕರ ವಸೂಲಿಗಾರ ಹುದ್ದೆಯನ್ನ ನಿಯಮ ಅನುಸಾರವಾಗಿ ನೇಮಕಾತಿ ಮಾಡಬೇಕು. ಆದ್ರೆ, 2014ರಲ್ಲಿ ಹುಚ್ಚಬಸಪ್ಪ ಎಂಬಾತನನ್ನು ಅಕ್ರಮ ದಾಖಲೆ ಸೃಷ್ಠಿ ಮಾಡುವ ಮೂಲಕ ಕರ ವಸೂಲಿಗಾರನಾಗಿ ನೇಮಕಾತಿ ಮಾಡಲಾಗಿತ್ತು. ಈ ಅಕ್ರಮ ನೇಮಕಾತಿಯನ್ನ ಪ್ರಶ್ನಿಸಿ, ಜಿಲ್ಲಾ ಪಂಚಾಯಿತಿಗೆ ದೂರು ಸಹ ಸಲ್ಲಿಸಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆ ಬಳಿಕ ಅಕ್ರಮ ನೇಮಕಾತಿಯಾಗಿರುವುದು ಸಾಬೀತಾಗಿದೆ. ತನಿಖಾ ವರದಿ ಹಲವು ದಿನಗಳ ಹಿಂದೆಯೇ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಲುಪಿದೆ.
ಆದರೆ, ಕರ ವಸೂಲಿಗಾರ ಹುಚ್ಚಬಸಪ್ಪನನ್ನು ನೇಮಕಾತಿಯಿಂದ ರದ್ದು ಮಾಡುತ್ತಿಲ್ಲ. ಕೂಡಲೇ ಹುಚ್ಚಬಸಪ್ಪ ನೇಮಕಾತಿಯನ್ನ ರದ್ದುಗೊಳಿಸಿ, ಇದುವರೆಗೆ ಪಡೆದಿರುವ ವೇತನ ಮರುಪಾವತಿ ಮಾಡಿಸಿಕೊಳ್ಳಬೇಕು. ಜತೆಗೆ ನೇಮಕಾತಿಯಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ರು. ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತಕ್ಕೆ ದೂರಿ ಸಲ್ಲಿಸಿ, ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.