ಕರ್ನಾಟಕ

karnataka

ETV Bharat / state

ಈ ದರ್ಗಾದಲ್ಲಿರುವ ಗೋರಿಗಳು ಉಸಿರಾಡುತ್ತವಂತೆ.. ಏನಿದೇನಿದು?

ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಗೋರಿಗಳು ಉಸಿರಾಡುತ್ತಿವೆಯಂತೆ. ಆನೆಹೊಸೂರು ಗ್ರಾಮದ ಹಜರತ್ ಸೈಯ್ಯದ್ ಪಾಷ ನಸೀರುದ್ದೀನ್ ನಬೀರ್ ಖಾದ್ರಿ ದರ್ಗಾದಲ್ಲಿರುವ ಗೋರಿಗಳು ಉಸಿರಾಡುತ್ತಿರುವಂತೆ ಬಂದಿದ್ದು, ಜನರನ್ನು ನಿಬ್ಬೆರಗಾಗಿಸಿದೆ.

ಗೋರಿಗಳು ಉಸಿರಾಡುತ್ತವಂತೆ..!?

By

Published : Oct 14, 2019, 4:35 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಗೋರಿಗಳು ಉಸಿರಾಡುತ್ತಿವೆಯಂತೆ. ಆನೆಹೊಸೂರು ಗ್ರಾಮದ ಹಜರತ್ ಸೈಯ್ಯದ್ ಪಾಷ ನಸೀರುದ್ದೀನ್ ನಬೀರ್ ಖಾದ್ರಿ ದರ್ಗಾದಲ್ಲಿರುವ ಗೋರಿಗಳು ಉಸಿರಾಡುತ್ತಿರುವಂತೆ ಕಂಡು ಬಂದಿದ್ದು, ಜನರನ್ನು ನಿಬ್ಬೆರಗಾಗಿಸಿದೆ.

ಗೋರಿಗಳು ಉಸಿರಾಡುತ್ತವಂತೆ..!?

ಪ್ರತಿ ವರ್ಷ ಉರುಸು ನಡೆಯುವ ವೇಳೆಯಲ್ಲಿ ದರ್ಗಾದಲ್ಲಿರುವ ಗೋರಿಗಳ ಮೇಲ್ಮೈ ಉಸಿರಾಡುವ ರೀತಿ ಕಂಡು ಬರುತ್ತದಂತೆ. ಗೋರಿಗಳ ಒಳಗಿರುವ ಪವಿತ್ರ ಆತ್ಮಗಳು ತಮ್ಮ ಪವಾಡವನ್ನು ತೋರಿಸಿ, ಭಕ್ತರಿಗೆ ಆಶೀರ್ವಾದಿಸುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆ.

ದರ್ಗಾದಲ್ಲಿರುವ ಹಜರತ್ ಸೈಯದ್ ಷಾಷ ನಸೀರುದ್ದೀನ್ ನಬೀರಾ ಖಾದ್ರಿ ಸೇರಿ ಮೂರು ಗೋರಿಗಳು ಉಸಿರಾಡಿದಂತೆ ಕಂಡು ಬಂದಿವೆ. ಪ್ರತಿವರ್ಷ ಉಸಿರಾಡುವ ಗೋರಿಗಳ ಪವಾಡವನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.ಇದು ಪವಾಡವೋ, ಮೂಢನಂಬಿಕೆಯೋ ಅಥವಾ ಕಾಣದ ಕೈಚಳಕವೋ ಗೊತ್ತಿಲ್ಲ. ಆದರೆ, ಒಂದೆಡೆ ಜನರಲ್ಲಿ ಆತಂಕ , ಮತ್ತೊಂದೆಡೆ ವಿಸ್ಮಯ ಸೃಷ್ಟಿಸಿವೆ.

ABOUT THE AUTHOR

...view details