ಕರ್ನಾಟಕ

karnataka

ETV Bharat / state

ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿ : ಆರ್. ಬಸವನಗೌಡ ತುರವಿಹಾಳ

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡರ ನಕಾರಾತ್ಮಕ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ನಾನು ಪರಾಭವಗೊಂಡ ಅನುಕಂಪ ಮತ್ತು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ವರ್ಚಸ್ಸು ಸಹ ನನ್ನ ಗೆಲುವಿಗೆ ಕಾರಣವಾಗಿದೆ.

By

Published : May 2, 2021, 4:24 PM IST

Updated : May 2, 2021, 4:36 PM IST

r-basanagowda-turvihala
ಆರ್.ಬಸವನಗೌಡ ತುರವಿಹಾಳ

ರಾಯಚೂರು : ಉಪ ಚುನಾವಣೆಯಲ್ಲಿ ನನ್ನ ಗೆಲುವು ಮಸ್ಕಿ ಕ್ಷೇತ್ರದ ಗೆಲುವು ಆಗಿದ್ದು, ನನ್ನನ್ನು ಗೆಲ್ಲಿಸಿದ ಮತದಾರರಿಗೆ ಋಣಿಯಾಗಿರುವೆ. ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಆರ್.ಬಸವನಗೌಡ ತುರವಿಹಾಳ ಭವಿಷ್ಯ ನುಡಿದಿದ್ದಾರೆ.

ಆರ್.ಬಸವನಗೌಡ ತುರವಿಹಾಳ

ನಗರದ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಕಿ ಕ್ಷೇತ್ರದ ಜನರು ಸ್ವಾಭಿಮಾನಿಗಳೆಂದು ತೋರಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಸಚಿವರುಗಳು ಬಂದು ಪ್ರಚಾರ ಮಾಡಿದರೂ ಅದನ್ನು ಲೆಕ್ಕಿಸದೆ ನನಗೆ ಬೆಂಬಲ ನೀಡಿದ್ದಾರೆ.

ಅಧಿಕಾರ ಮತ್ತು ಹಣದ ಬಲದ ಮುಂದೆ ಜನ ಬಲ ಮೇಲುಗೈ ಸಾಧಿಸಿದೆ ಎಂದ ಅವರು, ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡರ ನಕಾರಾತ್ಮಕ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ನಾನು ಪರಭವಗೊಂಡ ಅನುಕಂಪ ಮತ್ತು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ವರ್ಚಸ್ಸು ಸಹ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜೇಂದ್ರ ಅವರು, ಪ್ರತಾಪ ಗೌಡ ಜಯಗಳಿಸಿದರೆ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಜನರಿಗೆ ಭರವಸೆ ನೀಡಿದ್ದರು. ಆದರೆ, ಕ್ಷೇತ್ರದ ಸ್ವಾಭಿಮಾನಿ ಮತದಾರರು ಅದನ್ನು ಲೆಕ್ಕಿಸಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ, ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.

ಓದಿ:ಬಸನಗೌಡ ತುರುವಿಹಾಳಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಎಸ್​.ಆರ್​.ಪಾಟೀಲ್​​​

Last Updated : May 2, 2021, 4:36 PM IST

ABOUT THE AUTHOR

...view details