ಕರ್ನಾಟಕ

karnataka

ETV Bharat / state

ಪ್ರವಾಹದ ನಡುವೆ ಸಂತೆ ಮಾಡಿ ವಾಪಸ್​​ ಗ್ರಾಮಕ್ಕೆ ತೆರಳಿದ ನಡುಗಡ್ಡೆಯ ಜನರು.. - ಕೃಷ್ಣ ನದಿ ಅಪಾಯ ಮಟ್ಟ

ರಾಯಚೂರು ಜಿಲ್ಲೆಯ ಕುರವಕುಲ ನಡುಗಡ್ಡೆಯಲ್ಲಿ ವಾಸಿಸುವ ಜನ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂತೆಯಲ್ಲಿ ಖರೀದಿಸಿ, ಬಳಿಕ ಎನ್​​ಡಿಆರ್​ಎಫ್​​ ತಂಡದ ಸಹಾಯದೊಂದಿಗೆ ಮರಳಿ ಗ್ರಾಮಕ್ಕೆ ತೆರಳಿದ್ದಾರೆ.

ಸಂತೆ ಮಾಡಿ ವಾಪಸ್​​ ಗ್ರಾಮಕ್ಕೆ ತೆರಳಿದ ನಡುಗಡ್ಡೆ ಜನತೆ

By

Published : Aug 9, 2019, 9:15 AM IST

ರಾಯಚೂರು:ಜಿಲ್ಲೆಯ ಕುರವಕುಲ ನಡುಗಡ್ಡೆಯಲ್ಲಿ ವಾಸಿಸುವ ಜನ ಸಂತೆಯನ್ನ ಮುಗಿಸಿಕೊಂಡು ವಾಪಸ್ ನಡುಗಡ್ಡೆ ಪ್ರದೇಶಕ್ಕೆ ತೆರಳಿದ್ದಾರೆ.

ಇತಿಹಾಸ ಪ್ರಸಿದ್ದ ದತ್ತ ಪೀಠವಿರುವ ಕುರವಕುಲದಲ್ಲಿ ವಾಸ ಮಾಡುವ ಜನರು ತಮ್ಮ ದಿನನಿತ್ಯ ಬಳಕೆ ವಸ್ತುಗಳನ್ನು ತೆಗೆದುಕೊಂಡು ಅತ್ಕೂರು ಗ್ರಾಮದ ಕೃಷ್ಣ ನದಿ ತೀರದಿಂದ ತಾವು ವಾಸಿಸುವ ನಡುಗಡ್ಡೆ ಪ್ರದೇಶಕ್ಕೆ ಎನ್​​​​ಡಿಆರ್​​ಎಫ್ ತಂಡದ ಸಹಾಯದಿಂದ ಬೋಟ್ ಮೂಲಕ ತೆರಳಿದ್ದಾರೆ.

ಸಂತೆ ಮಾಡಿ ವಾಪಸ್​​ ಗ್ರಾಮಕ್ಕೆ ತೆರಳಿದ ನಡುಗಡ್ಡೆ ಜನತೆ..

30 ಜನ ಪುರುಷರು, 4 ಜನ ಮಹಿಳೆಯರು, ಮೂವರು ಮಕ್ಕಳು ಸೇರಿದಂತೆ ಒಟ್ಟು 37 ಜನರನ್ನ ಅವರಿಗೆ ಬೇಕಾದಂತ ಹಾಲಿನ ಪ್ಯಾಕೇಟ್, ತರಕಾರಿ, ಡೀಸೆಲ್, ಪೆಟ್ರೋಲ್, ಆಹಾರ ಪದಾರ್ಥಗಳು ಸೇರಿದಂತೆ ಔಷಧಿಗಳನ್ನ ತೆಗೆದುಕೊಂಡು ಅವರು ವಾಸಿಸುವ ನಡುಗಡ್ಡೆ ಪ್ರದೇಶಕ್ಕೆ ತೆರಳಿದ್ರು.

ಸಂತೆ ಮಾಡಿ ವಾಪಸ್​​ ಗ್ರಾಮಕ್ಕೆ ತೆರಳಿದ ನಡುಗಡ್ಡೆ ಜನತೆ..

ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನಡುಗಡ್ಡೆಯಲ್ಲಿ ವಾಸಿಸುವ ಜನರನ್ನ ಸುರಕ್ಷತಾ ಸ್ಥಳಕ್ಕೆ ಕರೆದುಕೊಂಡು ಬರಲಾಗಿತ್ತು. ಆದರೆ, ಕುರವಕುಲದಲ್ಲಿ ವಾಸಿಸುವಂತಹ ಜನರು ತಾವು ವಾಸ ಮಾಡುವಂತಹ ಸ್ಥಳಕ್ಕೆ ತೆರಳಬೇಕೆಂದು ಪಟ್ಟು ಹಿಡಿದ್ರು. ಆಗ ಎನ್​​​​ಡಿಆರ್​​ಎಫ್ ತಂಡ ತಾಲೂಕಾಡಳಿತದ ಆದೇಶದ ಮೇರೆಗೆ ವಾಪಸ್ ಬೋಟ್ ಮೂಲಕ ಅವರು ವಾಸಿಸುವಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details