ರಾಯಚೂರು:ಗಡಿಯಲ್ಲಿ ಬೈಕ್ ಸವಾರರ ತಡೆದಿದಕ್ಕೆ ಗುಂಪು ಕಟ್ಟಿಕೊಂಡು ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆಗಿಲ್ಲೆಸೂಗೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ರಾಯಚೂರು ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ರಾಜ್ಯದೊಳಗೆ ಎಂಟ್ರಿ ಇಲ್ಲ ಎಂದಿದಕ್ಕೆ ಗುಂಪು ಕಟ್ಟಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪುಂಡರು - ಬಳಿಕ 8 ಜನರ ಗುಂಪು ಆಗಮಿಸಿ ಪೊಲೀಸರ ಮೇಲೆ ಹಲ್ಲೆ
ಪ್ರಕರಣ ಸಂಬಂಧ ಆಂಧ್ರ ಪ್ರದೇಶದ ಚೆಟಪಲ್ಲಿ ಗ್ರಾಮದ ನರಸಿಂಹಲು, ವೆಂಕಟರಾಮುಲು, ವೀರೇಶ್, ಮಹಾನಂದಿ, ವೆಂಕಟೇಶ್, ತಿಕ್ಕಾಸ್ವಾಮಿ, ಗೋವಿಂದ, ಶಿನು ಎಂಬ ಆರೋಪಿಗಳ ಬಂಧಿಸಲಾಗಿದ್ದು, ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಪುಂಡರು
ಈ ನಡುವೆ ಆಂಧ್ರಪ್ರದೇಶ ಮೂಲದ ಬೈಕ್ ಸವಾರರು ರಾಜ್ಯದೊಳಗೆ ಬರಲು ಮುಂದಾಗಿದ್ದಾರೆ. ಆದರೆ, ಗಡಿಯಲ್ಲಿನ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ. ಇದಾದ ಬಳಿಕ 8 ಜನರ ಗುಂಪು ಆಗಮಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿರುವ ಆರೋಪಿಗಳು ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ.
ಪ್ರಕರಣ ಸಂಬಂಧ ಆಂಧ್ರ ಪ್ರದೇಶದ ಚೆಟಪಲ್ಲಿ ಗ್ರಾಮದ ನರಸಿಂಹಲು, ವೆಂಕಟರಾಮುಲು, ವೀರೇಶ್, ಮಹಾನಂದಿ, ವೆಂಕಟೇಶ್, ತಿಕ್ಕಾಸ್ವಾಮಿ, ಗೋವಿಂದ, ಶಿನು ಎಂಬ ಆರೋಪಿಗಳ ಬಂಧಿಸಲಾಗಿದ್ದು, ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.