ರಾಯಚೂರು:ಕೃಷ್ಣಾ ನದಿಗೆ ಈಜಲು ತೆರಳಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ರಾಯಚೂರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೃಷ್ಣಾ ನದಿಗೆ ಈಜಲು ತೆರಳಿದ ವ್ಯಕ್ತಿ ಮರಳಿ ಬರಲೇ ಇಲ್ಲ...! - ರಾಯಚೂರು ಜಿಲ್ಲೆಯ ದೇವದುರ್ಗ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟ ಬಳಿಯ ಕೃಷ್ಣ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೃಷ್ಣ ನದಿಗೆ ಈಜಲು ತೆರಳಿದ ವ್ಯಕ್ತಿ ಮರಳಿ ಬರಲೇ ಇಲ್ಲ...!
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟ ಬಳಿಯ ಕೃಷ್ಣ ನದಿಯಲ್ಲಿ ವ್ಯಕ್ತಿಯು ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನ ಪ್ರಕಾಶ್ ಬಡಿಗೇರ್(24) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬ ನಿಮಿತ್ಯ ಸಂಬಂಧಿಕರೊಡನೆ ನದಿಗೆ ಸ್ನಾನ ಮಾಡಲು ತೆರಳಿದ್ದ ಈತ ನದಿಯಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಮೃತ ವ್ಯಕ್ತಿಗೆ ಇತ್ತೀಚೆಗೆಷ್ಟೆ ವಿವಾಹವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.