ಕರ್ನಾಟಕ

karnataka

ETV Bharat / state

ಹಸುವಿನ ಬಾಯಿಗೆ ಸಿಲುಕಿದ್ದ ಕಬ್ಬಿಣದ ಡಬ್ಬಿ ತೆಗೆದು ಜೀವದಾನ ನೀಡಿದ ಸ್ಥಳೀಯರು! - ಬಾಯಿಗೆ ಸಿಲುಕಿದ್ದ ಕಬ್ಬಿಣದ ಡಬ್ಬಿ ತೆರವು

ಬಿಡಾಡಿ ಹಸುವಿನ ಬಾಯಿಗೆ ಸಿಲುಕಿದ್ದ ಕಬ್ಬಿಣದ ಡಬ್ಬಿಯನ್ನು ಸ್ಥಳೀಯರು ಹಾಗೂ ವೈದ್ಯರ ಸಹಾಯದಿಂದ ಸುರಕ್ಷಿತವಾಗಿ ತೆಗೆದು ಹಸುವನ್ನು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಕಬ್ಬಿಣದ ಡಬ್ಬಿ
ಕಬ್ಬಿಣದ ಡಬ್ಬಿ

By

Published : Nov 14, 2020, 8:56 PM IST

ರಾಯಚೂರು: ಬಿಡಾಡಿ ಹಸುವಿನ ಬಾಯಿಗೆ ಸಿಲುಕಿದ್ದ ಕಬ್ಬಿಣದ ಡಬ್ಬಿಯನ್ನು ಸ್ಥಳೀಯರು ಹಾಗೂ ವೈದ್ಯರ ಸಹಾಯದಿಂದ ಸುರಕ್ಷಿತವಾಗಿ ತೆಗೆದು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ನಗರದ ವಾಸವಿ ಬಡಾವಣೆಯಲ್ಲಿ ನಡೆದಿದೆ.

ಬಿಡಾಡಿ ಹಸುವಿನ ಬಾಯಿಗೆ ಸಿಲುಕಿದ್ದ ಕಬ್ಬಿಣದ ಡಬ್ಬಿ ತೆರವು

ಬಡಾವಣೆಯಲ್ಲಿ ಕಳೆದೆರಡು ದಿನಗಳ ಹಿಂದೆ ಬಿಡಾಡಿ ಹಸುವೊಂದು ಕಸದ ರಾಶಿಯಲ್ಲಿ ಮೇಯುತ್ತಿದ್ದ ವೇಳೆ ಕಬ್ಬಿಣದ ಡಬ್ಬಿಯೊಂದು ಬಾಯಿಗೆ ಸಿಲುಕಿತ್ತು. ಬಿಡಿಸಿಕೊಳ್ಳಲು ಆಗದೆ ನಿತ್ರಾಣಗೊಂಡಿದ್ದ ಹಸುವನ್ನು ಗಮನಿಸಿದ ಸ್ಥಳೀಯ ನಿವಾಸಿಗಳು, ಕಬ್ಬಿಣದ ಡಬ್ಬಿಯನ್ನು ಸುರಕ್ಷಿತವಾಗಿ ತೆಗೆದು ವೈದ್ಯರ ಸಲಹೆ ಪಡೆದು ಉಪಚಾರ ಮಾಡಿ, ಹಸುವಿಗೆ ಆಹಾರ ನೀಡುವ ಮೂಲಕ ಅದನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ABOUT THE AUTHOR

...view details