ರಾಯಚೂರು :ಪ್ರೀತಿ ವಿವಾಹಕ್ಕೆ ಸಂಬಂಧಿಸಿದಂತೆ ಯುವಕನ ಮನೆಯ ನಾಲ್ವರು ಸದಸ್ಯರನ್ನು ಯುವತಿಯ ಕಡೆಯವರು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿನ ಸುಂಕಾಲಪೇಟೆಯಲ್ಲಿ ನಡೆದಿದೆ.
ಸುಂಕಾಲಪೇಟೆ ನಿವಾಸಿಗಳಾದ ಮೌನೇಶ್, ಮಂಜುಳಾ ಇಬ್ಬರು ಪರಸ್ಪರ ಪ್ರೀತಿಸಿ ಕೆಲ ತಿಂಗಳ ಹಿಂದೆ ವಿವಾಹವಾಗಿದ್ದರು. ವಿವಾಹದ ಬಳಿಕ ಮಂಜುಳಾ ತನ್ನ ಪತ್ನಿಯೊಂದಿಗೆ ತವರು ಮನೆಗೆ ತೆರಳಿದ್ದಾಳೆ. ಈ ವೇಳೆ ಮಂಜುಳಾ ಕುಟುಂಬಸ್ಥರು, ಮಗಳಿಗೆ ಮತ್ತು ಮೌನೇಶ್‌ಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡ ಮಂಜುಳಾ ಮತ್ತು ಮೌನೇಶ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಈ ವಿಷಯ ತಿಳಿದ ಮಂಜುಳಾ ಕುಟುಂಬಸ್ಥರು ಮೌನೇಶ್ ಮನೆಗೆ ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ ಸಿಕ್ಕ ಸಿಕ್ಕ ವಸ್ತುಗಳಿಂದ ಮೌನೇಶ್ ಕುಟುಂಬದವರನ್ನು ಹತ್ಯೆ ಮಾಡಿದ್ದಾರೆ.