ರಾಯಚೂರು: ಕುರುಬ ಸಮುದಾಯವನ್ನು ಎಸ್ಟಿಗೆ (ಪರಿಶಿಷ್ಟ ಪಂಗಡ) ಸೇರಿಸಲು ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಕುರುಬ ಸಮಯದಾಯದ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಈ ಕುರಿತು ಹೋರಾಟ ನಡೆಸಲಾಗುತ್ತಿದೆ. 1868 ರಲ್ಲಿ ಬ್ರಿಟಿಷ್ ಸರ್ಕಾರದ ಪೀಪಲ್ ಆಫ್ ಇಂಡಿಯಾ ಬುಕ್ನಲ್ಲಿ ನಮ್ಮ ಸಮುದಾಯವನ್ನು ಬುಡಕಟ್ಟು ಎಂದು ಬರೆದಿದೆ. 1901ರ ಬ್ರಿಟಿಷ್ ಸರ್ಕಾರದ ಜನಗಣತಿಯಲ್ಲೂ ಕುರುಬರು ಬುಡಕಟ್ಟು ಜನಾಂಗದವರು ಎಂದು ಉಲ್ಲೇಖವಿದೆ. ಮದ್ರಾಸ್ ಭಾಗಗಳಲ್ಲಿ ಕುರುಬ ಹೆಸರಿನಲ್ಲಿ ಎಸ್‌ಟಿ ಮೀಸಲಾತಿ ಪಡೆದಿದ್ದು, ಉಳಿದಂತೆ ಕೆಲವೆಡೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಎಸ್‌ಟಿ ಮೀಸಲಾತಿ ದೊರೆತಿಲ್ಲ ಎಂದರು.