ರಾಯಚೂರು: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಮುದಗಲ್ ಮೊಹರಂ ಆಚರಣೆಯನ್ನ ಪ್ರಸಕ್ತ ವರ್ಷ ರದ್ದುಪಡಿಸಲಾಗಿದೆ.
ಇತಿಹಾಸ ಪ್ರಸಿದ್ಧ ಮುದಗಲ್ ಮೊಹರಂ ಆಚರಣೆ ರದ್ದು - ರಾಯಚೂರು ಜಿಲ್ಲೆಯ ಲಿಂಗಸೂಗೂರು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಕೋಟೆಯಲ್ಲಿ ಮೊಹರಂ ಹಬ್ಬವನ್ನು ಹತ್ತು ದಿನಗಳ ಕಾಲ ಪ್ರತೀ ವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಸದ್ಯ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಮುದಗಲ್ ಮೊಹರಂ ಆಚರಣೆಯನ್ನ ಪ್ರಸಕ್ತ ವರ್ಷ ರದ್ದುಪಡಿಸಲಾಗಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಕೋಟೆಯಲ್ಲಿ ಮೊಹರಂ ಹಬ್ಬವನ್ನು ಹತ್ತು ದಿನಗಳ ಕಾಲ ಪ್ರತೀ ವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿ ಇರುವುದರಿಂದ ಹುಸೇನಿ ಆಲಂ ಅಷುರ್ ಖಾನ್ ದರ್ಗಾ ಕಮಿಟಿಯು ಗ್ರಾಮಸ್ಥರು, ಮುಖಂಡರು, ಕಮಿಟಿಯ ಸದಸ್ಯರು, ಅಧ್ಯಕ್ಷರೆಲ್ಲರ ಅಭಿಪ್ರಾಯವನ್ನ ಸಂಗ್ರಹಿಸುವ ಮೂಲಕ ಮೊಹರಂ ಆಚರಣೆಯನ್ನ ಸಂಪೂರ್ಣವಾಗಿ ರದ್ದುಪಡಿಸುವ ತಿರ್ಮಾನಕ್ಕೆ ಬಂದಿದೆ.
10 ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿದ್ದ ಮೊಹರಂ ಆಚರಣೆಯಲ್ಲಿ ಆಲಂ ದೇವರಗಳ ಪಂಜ ತೊಳೆಯಲಾಗುತ್ತಿತ್ತು. ಈ ವಿಶೇಷ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಕೊರೊನಾ ಸೋಂಕಿನ ಹರಡುವಿಕೆಯನ್ನ ಹತೋಟಿಗೆ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಕಮಿಟಿ ತಿಳಿಸಿದೆ.