ಕರ್ನಾಟಕ

karnataka

By

Published : Mar 27, 2020, 2:38 PM IST

ETV Bharat / state

ರಾಯಚೂರು: ರೈತರಿಗೂ ಆಪತ್ತು ತಂದ ಕೋವಿಡ್-19

ಬಿಸಿಲೂರು ರಾಯಚೂರು ಜಿಲ್ಲೆಯ ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಜಿಲ್ಲೆ ಸ್ತಬ್ಧವಾಗಿದೆ. ಸಾರಿಗೆ ಸಂಚಾರ, ಖಾಸಗಿ ವಾಹನಗಳು, ಸರಕು-ಸಾಗಣಿಕೆಗಳು ಓಡಾಟ ಸ್ಥಗಿತಗೊಂಡಿವೆ.

Covid-19
ರಾಯಚೂರು: ರೈತರಿಗೂ ಆಪತ್ತು ತಂದ ಕೋವಿಡ್-19

ರಾಯಚೂರು:ಕೊರೊನಾ ಸೋಂಕಿನ ಭೀತಿಯಿಂದ ಹಲವು ಉದ್ಯಮಗಳು ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದೀಗ ಈ ಸೋಂಕು ಪಪ್ಪಾಯಿ ಬೆಳೆಗಾರರಿಗೆ ಆಪತ್ತು ತರುವ ಮೂಲಕ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುವಂತಾಗಿದೆ.

ರಾಯಚೂರು: ರೈತರಿಗೂ ಆಪತ್ತು ತಂದ ಕೋವಿಡ್-19

ಹೌದು, ಬಿಸಿಲೂರು ರಾಯಚೂರು ಜಿಲ್ಲೆಯ ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಜಿಲ್ಲೆಯ ಸ್ತಬ್ಧವಾಗಿದೆ. ಸಾರಿಗೆ ಸಂಚಾರ, ಖಾಸಗಿ ವಾಹನಗಳು, ಸರಕು-ಸಾಗಣಿಕೆಗಳು ಓಡಾಟ ಸ್ಥಗಿತಗೊಂಡಿವೆ. ಇದರ ಪರಿಣಾಮ ರೈತಾಪಿ ವರ್ಗದ ಮೇಲೆ ಬೀರಿದೆ. ಹೌದು, ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ರೈತರಾದ ದೇವೇಂದ್ರಗೌಡ, ಪಾರ್ವತಿ, ಆನಂದಗೌಡ ಎನ್ನುವರು ತಮ್ಮ 15 ಎಕರೆ ಜಮೀನು ಪೈಕಿ 13 ಎಕರೆ ಸುಮಾರು 18 ರಿಂದ 20 ಲಕ್ಷ ರೂಪಾಯಿ ವ್ಯಯ ಮಾಡಿ ಪಪ್ಪಾಯಿ ಬೆಳೆಯನ್ನ ಬೆಳೆದಿದ್ದಾರೆ. ಬೆಳೆದ ಉತ್ತಮ ಇಳುವರಿ ಬಂದಿದೆ. ಆದ್ರೆ ಮಾರಾಟ ಮಾಡಲು ಮಾರುಕಟ್ಟೆ ಸಮಸ್ಯೆ ಎದುರಾಗಿ, ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಇನ್ನೂ ಈ ಮೂವರು ರೈತರು ಮಹಾರಾಷ್ಟ್ರದಿಂದ 13 ರೂಪಾಯಿಗೆ ಒಂದರಂತೆ 9,700 ಸಸಿಗಳನ್ನ ತರಿಸಿ, ತಮ್ಮ 13 ಎಕರೆಯಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಬೆಳೆಗೆ ಹಗಲು - ಇರುಳು ಎನ್ನದೇ ಕಾಲ ಕಾಲಕ್ಕೆ ಔಷಧ ಉಪಚಾರ ಮಾಡಿದ್ದಾರೆ. ಇದರ ಪರಿಣಾಮ 9 ತಿಂಗಳಲ್ಲಿ ಫಸಲು ಬಂದಿದೆ. ಒಂದು ಗಿಡಕ್ಕೆ ಏನು ಇಲ್ಲದಾರೂ 50 ಕೆ.ಜಿ. ಹಣ್ಣು ಬರುತ್ತಿದೆ. ಆದ್ರೆ ಬರುತ್ತಿರುವ ಫಸಲನ್ನು ಮಾರುಕಟ್ಟೆ ಮಾರಾಟ ಮಾಡಲು ಅವಕಾಶವಿಲ್ಲದ ಪರಿಣಾಮ ವಾರಕ್ಕೆ ಸುಮಾರು ನಾಲ್ಕೈದು ಟನ್ ತಿಪ್ಪೆಗುಂಡಿ ಹಾಕಿ ಮುಚ್ಚಿ, ರೈತರ ಜೀವ ಹಿಂಡುತ್ತಿದೆ.

ಪಪ್ಪಾಯಿಗೆ ಬಾಂಬೆ, ಹೈದರಾಬಾದ್ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯಿದೆ. ಇಲ್ಲಿ ಬೆಳೆದ ಬೆಳೆಯನ್ನ ಈ ರೈತರು ಹೈದರಾಬಾದ್ ಇಲ್ಲವೇ ಬಾಂಬೆಗೆ ಮಾರಾಟ ಮಾಡುತ್ತಿದ್ದರು. ಆದ್ರೆ ಇಂಡಿಯಾ ಲಾಕ್​ಡೌನ್​ನಿಂದ ಸರಕು-ಸಾಗಣೆ, ವ್ಯಾಪಾರ ವಹಿವಾಟು ಸ್ತಬ್ಧವಾದ ಪರಿಣಾಮ ಬೆಳೆದ ಬೆಳೆಯನ್ನ ಮಾರಾಟ ಮಾಡಲು ಸಾಧ್ಯವಾಗದೆ ರೈತರು ಪರದಾಡುವಂತಾಗಿದೆ. ಶ್ರಮ ವಹಿಸಿ ಬೆಳೆದ ಫಸಲಿನಿಂದ ಲಾಭದ ನಿರೀಕ್ಷೆಯಲ್ಲಿದ ರೈತನಿಗೆ ಕೊರೊನಾ ಎಫೆಕ್ಟ್ ಹಾಕಿದ ಬಂಡವಳ ಸಹ ಕೈಗೆ ಸೇಗದಿರುವ ಪರಿಸ್ಥಿತಿ ಎದುರಾಗಿದ್ದು, ನಮ್ಮ ಬೆಳೆಯ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿ ಎಂದು ರೈತರು ಸರ್ಕಾರ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ರೈತರು ಯಾವ ರೀತಿ ಸ್ಪಂದನೆ ಮಾಡುತ್ತದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ABOUT THE AUTHOR

...view details