ಕರ್ನಾಟಕ

karnataka

ETV Bharat / state

ಕೊರೊನಾ: ಮೈಸೂರು ಅರಮನೆ, ನಾಗರಹೊಳೆ ಸಫಾರಿ ಕೇಂದ್ರಗಳು ಬಂದ್ - Mysuru Palace

ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಹಾಗೂ ನಾಗರಹೊಳೆ ಸಫಾರಿ ಕೇಂದ್ರಗಳನ್ನು ಮಾ.15ರಿಂದ ಮಾ.22ರವರೆಗೆ ಬಂದ್ ಮಾಡಲು ಸೂಚಿಸಲಾಗಿದೆ.

The Corona effect: Palace-Nagarahole Safari centers close
ಕೊರೋನಾ ಹರಡುತ್ತಿರುವ ಹಿನ್ನಲೆ ಅರಮನೆ-ನಾಗರಹೊಳೆ ಸಫಾರಿ ಕೇಂದ್ರಗಳು ಬಂದ್

By

Published : Mar 14, 2020, 11:47 PM IST

ಮೈಸೂರು:ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಹಾಗೂ ನಾಗರಹೊಳೆ ಸಫಾರಿ ಕೇಂದ್ರಗಳನ್ನು ಮಾ.15ರಿಂದ ಮಾ.22ರವರೆಗೆ ಬಂದ್ ಮಾಡಲು ಸೂಚಿಸಲಾಗಿದೆ.

ಕೊರೊನಾ ಕಾರಣ ಅರಮನೆ-ನಾಗರಹೊಳೆ ಸಫಾರಿ ಕೇಂದ್ರಗಳು ಬಂದ್

ಕೊವಿಡ್-19(ಕೊರೊನಾ ವೈರಸ್) ಹರಡುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೇ, ಸಂಜೆ ವೇಳೆ ಧ್ವನಿ-ಬೆಳಕು ಕಾರ್ಯಕ್ರಮ ವೀಕ್ಷಣೆ, ಪ್ರತಿ ಭಾನುವಾರ ಮತ್ತು ರಜೆ ದಿನಗಳಲ್ಲಿ ನಡೆಯುವ ದೀಪಾಲಂಕಾರ ವೀಕ್ಷಣೆಯನ್ನೂ ಸ್ಥಗಿತಗೊಳಿಸಲಾಗಿದೆ‌ ಎಂದು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ. ಎಸ್. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಖ್ಯದ್ವಾರದ ಸಫಾರಿ ಕೇಂದ್ರ ಹಾಗೂ ದಮ್ಮನಕಟ್ಟೆ(ಕಾಕನಕೋಟೆ)‌ಸಫಾರಿ ಕೇಂದ್ರಗಳೂ ಪ್ರವಾಸಿಗರಿಗೆ ಲಭ್ಯವಿರುವುದಿಲ್ಲ.

ABOUT THE AUTHOR

...view details