ರಾಯಚೂರು:ಕೊರೊನಾ ಸೋಂಕು ಹಿನ್ನೆಲೆ ಶ್ರೀಶೈಲಕ್ಕೆ ತೆರಳುತ್ತಿದ್ದ ಭಕ್ತರು, ಪಾದಯಾತ್ರೆಯನ್ನ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದಾರೆ.
ಕೊರೊನಾ ಎಫೆಕ್ಟ್... ಶ್ರೀಶೈಲಕ್ಕೆ ತೆರಳುತ್ತಿದ್ದ ಭಕ್ತರು ಸ್ವಗ್ರಾಮಕ್ಕೆ ವಾಪಸ್ - ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಪಾದಯಾತ್ರೆ
ದೇಶವ್ಯಾಪಿ ಅಬ್ಬರಿಸುತ್ತಿರುವ ಕೊರೊನಾ ಬಿಸಿಯು ಶ್ರೀಶೈಲಕ್ಕೆ ತೆರಳುವ ಭಕ್ತರ ಮೇಲೂ ಬಿದ್ದಿದೆ. ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ಭಕ್ತರು ಕೊರೊನೊ ಭೀತಿಯಿಂದ ತಮ್ಮ ಸ್ವಗ್ರಾಮಕ್ಕೆ ವಾಪಸ್ ತೆರಳುತ್ತಿದ್ದಾರೆ.
ಶ್ರೀಶೈಲಕ್ಕೆ ತೆರಳುವ ಭಕ್ತರಿಗು ತಟ್ಟಿದ ಕೊರೊನಾ ಎಫೆಕ್ಟ್..!
ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತೆರಳುತ್ತಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಶ್ರೀಶೈಲ ಜಾತ್ರೆಯನ್ನು ಮೊಟಕುಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ನಾನಾ ಕಡೆಯಿಂದ ರಾಯಚೂರು ಜಿಲ್ಲೆಯವರೆಗೆ ಬಂದ ಪಾದಯಾತ್ರಿಕರು ಅರ್ಧಕ್ಕೆ ನಿಲ್ಲಿಸಿ ತಮ್ಮ ಗ್ರಾಮಗಳಿಗೆ ವಾಪಸ್ ತೆರಳುತ್ತಿದ್ದಾರೆ.