ಲಿಂಗಸುಗೂರು: ತಾಲೂಕಿನ ಮುದಗಲ್ಲ ಸಮೀಪದ ಸೋಮನಾಯಕನ ತಾಂಡಾ ಬಳಿ ಬೈಕ್ ಪಲ್ಟಿಯಾಗಿ ಸವಾರ ಮೃತಪಟ್ಟಿದ್ದಾನೆ.
ಲಿಂಗಸುಗೂರು: ಬೈಕ್ ಸ್ಕಿಡ್ ಆಗಿ ಸವಾರ ಸಾವು - Mudgalla Bike Accident News 2020
ಲಿಂಗಸುಗೂರು ತಾಲೂಕಿನ ಮಸ್ಕಿಯಿಂದ ಮುದಗಲ್ಲ ಸಂಪರ್ಕಿಸುವ ರಸ್ತೆಯಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಸವಾರ ಸಾವಿಗೀಡಾಗಿದ್ದಾನೆ.
![ಲಿಂಗಸುಗೂರು: ಬೈಕ್ ಸ್ಕಿಡ್ ಆಗಿ ಸವಾರ ಸಾವು the-bike-accident-near-mudgalla](https://etvbharatimages.akamaized.net/etvbharat/prod-images/768-512-9352211-22-9352211-1603957021126.jpg)
ಬೈಕ್ ಪಲ್ಟಿ, ಸವಾರ ಮೃತ.
ಬುಧವಾರ ಮಧ್ಯರಾತ್ರಿ ಮಸ್ಕಿಯಿಂದ ಮುದಗಲ್ಲ ಸಂಪರ್ಕಿಸುವ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿರುವ ಪರಿಣಾಮ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ಮುದಗಲ್ಲನ ಹಳೆಪೇಟೆ ಮೌಲಸಾಬ (25) ಎಂದು ಗುರುತಿಸಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಮಸ್ಕಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.