ಕರ್ನಾಟಕ

karnataka

ETV Bharat / state

ಲಿಂಗಸೂಗೂರು ತಹಸೀಲ್ದಾರ್​ ಕಚೇರಿಯಲ್ಲಿ ಲಂಚಾವತಾರ: ವಿಡಿಯೋ ವೈರಲ್​ - ಲಿಂಗಸೂಗೂರು ತಹಶೀಲ್ದಾರ್​ ಕಚೇರಿ

ಲಿಂಗಸೂಗೂರು ತಹಸೀಲ್ದಾರ್​ ಕಚೇರಿಯ ಅಧಿಕಾರಿಯೊಬ್ಬ ಜನರಿಂದ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್​ ಆಗಿದೆ

ಲಂಚ ಪಡೆಯುತ್ತಿರುವ ಲಿಂಗಸೂಗೂರು ತಹಶೀಲ್ದಾರ್​ ಕಚೇರಿಯ ಅಧಿಕಾರಿ

By

Published : Mar 16, 2019, 2:28 PM IST

ರಾಯಚೂರು: ಲಿಂಗಸೂಗೂರು ತಹಸೀಲ್ದಾರ್​ ಕಚೇರಿಯಲ್ಲಿ ಪ್ರಮಾಣ ಪತ್ರಗಳನ್ನು ನೀಡಲು ಸಿಬ್ಬಂದಿಯೋಬ್ಬ ಸಾರ್ವಜನಿಕರಿಂದ ಲಂಚ ತೆಗೆದುಕೊಳ್ಳುವ ವಿಡಿಯೊವೊಂದು ವೈರಲ್ ಆಗಿದೆ.

ಲಿಂಗಸೂಗೂರು ಪಟ್ಟಣದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಕೆಲ ಸಿಬ್ಬಂದಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನನ ಮರಣ ಸೇರಿ ಹಲವು ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸುವ ಜನರಿಂದ ಅಧಿಕ ಮೊತ್ತ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಲಂಚ ಪಡೆಯುತ್ತಿರುವ ಲಿಂಗಸೂಗೂರು ತಹಶೀಲ್ದಾರ್​ ಕಚೇರಿಯ ಅಧಿಕಾರಿ

ಇದರಿಂದ ರೋಸಿ ಹೋದ ಸಾರ್ವಜನಿಕರು ತಹಸೀಲ್ದಾರ್​ ಕಚೇರಿಯ ಲಂಚವಾತಾರದ ವಿಡಿಯೋ ಮಾಡಿ, ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ವಾಟ್ಸಪ್ ಗ್ರೂಪ್‌ಗಳಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್​ ಆದ ಹಿನ್ನೆಲೆ ತಹಸೀಲ್ದಾರ್​ ಕಚೇರಿ ಸಿಬ್ಬಂದಿ ವಿರುದ್ಧ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details