ರಾಯಚೂರು:ಮನೆಯಲ್ಲಿ ಶಿಕ್ಷಕಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದಿದೆ.
ಮಾನವಿ ಪಟ್ಟಣದಲ್ಲಿನ 4ನೇ ವಾರ್ಡ್ನ ನಿವಾಸಿ ಶಾಲಿನಿ ಮೋಹನ್ (33) ಮೃತ ಶಿಕ್ಷಕಿ. ಇವರು ಮೂಲತಃ ತುಮಕೂರು ಮೂಲದವರು ಎಂದು ಹೇಳಲಾಗುತ್ತಿದೆ. ಶಾಲಿನ ಮಾನವಿ ತಾಲೂಕಿನ ನಸಲಾಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.