ಕರ್ನಾಟಕ

karnataka

ETV Bharat / state

ಮುಂಬಡ್ತಿ ಪಡೆದ ದಿನವೇ ಅಪಘಾತದಲ್ಲಿ ಶಿಕ್ಷಕ ದುರ್ಮರಣ - ರಾಯಚೂರಿನ ಬೈಕ್ ಅಪಘಾತದಲ್ಲಿ ಶಿಕ್ಷಕ ದುರ್ಮರಣ

ಇದರ ಆದೇಶದ ಪ್ರತಿಯನ್ನ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದುಕೊಂಡು ಬೈಕ್​ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಡದೂರು ಗ್ರಾಮದ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕುರಿತಂತೆ ಯಾವುದೇ ಎಚ್ಚರಿಕೆಯ ನಾಮಫಲಕಗಳನ್ನು ಗುತ್ತಿಗೆದಾರ ಹಾಕಿಲ್ಲ..

teacher dies in a accident
ಅಪಘಾತದಲ್ಲಿ ಶಿಕ್ಷಕ ಸಾವು

By

Published : Jan 5, 2021, 9:18 AM IST

ರಾಯಚೂರು :ಮನೆಗೆ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಶಿಕ್ಷಕ ಸಾವು

ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ರಾಮಯ್ಯ ನಾಯ್ಕ(53) ಮೃತ ಶಿಕ್ಷಕನೆಂದು ಗುರುತಿಸಲಾಗಿದೆ. ಉದ್ಬಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಯ್ಯನಾಯಕರಿಗೆ, ಸೋಮವಾರದಂದು ಮುಂಬಡ್ತಿ ಸಿಕ್ಕಿತ್ತು.

ಇದರ ಆದೇಶದ ಪ್ರತಿಯನ್ನ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದುಕೊಂಡು ಬೈಕ್​ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಡದೂರು ಗ್ರಾಮದ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕುರಿತಂತೆ ಯಾವುದೇ ಎಚ್ಚರಿಕೆಯ ನಾಮಫಲಕಗಳನ್ನು ಗುತ್ತಿಗೆದಾರ ಹಾಕಿಲ್ಲ.

ಇದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಪಘಾತ ಸಂಬಂಧ ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ: 200 ಗ್ರಾಂ ಎಂಡಿಎಂಎ ವಶ

ABOUT THE AUTHOR

...view details