ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕೃಷ್ಣಾ ಪ್ರವಾಹಕ್ಕೆ ಸಿಲುಕಿದವರ ಬಗ್ಗೆ 'ಈಟಿವಿ ಭಾರತ' ಮಾಡಿದ್ದ ವರದಿಗೆ ಎಚ್ಚೆತ್ತುಕೊಂಡ ತಾಲೂಕು ಆಡಳಿತದ ಅಧಿಕಾರಿಗಳು ನಡುಗಡ್ಡೆ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದಿರುವುದಕ್ಕೆ ಸಂತ್ರಸ್ತರ ಆಕ್ರೋಶ

ಸೋಮವಾರ ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ, ಸಿಪಿಐ ಯಶವಂತ ಬಿಸನಳ್ಳಿ ನೇತೃತ್ವದಲ್ಲಿ ಶೀಲಹಳ್ಳಿ ಸೇತುವೆ, ಯಳಗುಂದಿ, ಯರಗೋಡಿ ಸೇರಿದಂತೆ ಮ್ಯಾದರಗಡ್ಡಿ, ಕರಕಲಗಡ್ಡಿ ಕುಟುಂಬಸ್ಥರ ಉಭಯ ಕುಶಲೋಪರಿ ವಿಚಾರಣೆ ನಡೆಸಿದರು.
ನಡುಗಡ್ಡೆಯ ಜನತೆಗೆ ನೀರಿಗೆ ಇಳಿಯದಂತೆ, ನಡುಗಡ್ಡೆ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಬರುವಂತೆ ಸೂಚಿಸಿದರೂ ಪುನಃ ಅಪಾಯಕ್ಕೆ ಸಿಲುಕುವುದು ತರವಲ್ಲ. ತಮಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ತಮಗೆ ಸುರಕ್ಷತೆ ಮತ್ತು ಸೌಲಭ್ಯ ಕಲ್ಪಿಸಲು ಅಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ಆತ್ಮಸ್ಥೈರ್ಯ ತುಂಬಿದರು.