ರಾಯಚೂರು : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಾಲೂಕು ಪಂಚಾಯಿತಿ ಸದಸ್ಯನೋರ್ವ ತಮ್ಮ ತಾ,ಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರಸಂಗ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಗ್ರಾ.ಪಂ. ಸದಸ್ಯ ಸ್ಥಾನಕ್ಕಾಗಿ, ತಾಲೂಕು ಪಂಚಾಯಿತಿಗೆ ರಾಜೀನಾಮೆ ನೀಡಿದ್ರು! - ರಾಯಚೂರು ತಾಲೂಕು ಪಂಚಾಯತಿ ಸದಸ್ಯ ರಾಜೀನಾಮೆ
ಇವರು ತಾ.ಪಂ. ಸದಸ್ಯರಾಗಿರುವಾಗಲೇ ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಭೂಮನಗುಂಡ ಗ್ರಾಮದ 1ನೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯಾವುದಾದರೊಂದು ಸ್ಥಾನದಲ್ಲಿ ಮುಂದುವರೆಯಬೇಕಾದ ಹಿನ್ನೆಲೆಯಲ್ಲಿ ಇಂದು ತಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಕ್ಯಾದಿಗೇರ ತಾ.ಪಂ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹನುಮಯ್ಯ ಬಸಯ್ಯ ಭೂಮನಗೌಡ ರಾಜೀನಾಮೆ ಸಲ್ಲಿಸಿದ ಸದಸ್ಯ. ಇವರು 2015ರಲ್ಲಿ ನಡೆದ ತಾ.ಪಂ. ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ತಾ.ಪಂ. ಸದಸ್ಯರಾಗಿರುವಾಗಲೇ ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಭೂಮನಗುಂಡ ಗ್ರಾಮದ 1ನೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಒಂದು ಸ್ಥಾನದಲ್ಲಿ ಮುಂದುವರೆಯಬೇಕಾದ ಕಾರಣ ಇಂದು ತಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಮುಂದುವರೆಯುವ ಮೂಲಕ, ತಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.