ಕರ್ನಾಟಕ

karnataka

ETV Bharat / state

ಅಕ್ರಮ ಮರಳುಗಾರಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಿ: ಸಂತೋಷ ಕಾಮಗೌಡ - Santhosh kamagowdha

ರಾಯಚೂರು ಜಿಲ್ಲೆಯ ದೇವದುರ್ಗದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಮರಳುಗಾರಿಕೆ ನಿಯಂತ್ರಣ ಸಮಿತಿ ಸಭೆ ನಡೆಸಲಾಯಿತು.

Meeting
Meeting

By

Published : Sep 12, 2020, 9:56 AM IST

ರಾಯಚೂರು: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಯನ್ನ ನಿಯಂತ್ರಿಸಲು ಮರಳು ಸಮಿತಿ ಸೂಚಿಸಿದಂತೆ ಹೊಸ ಮರಳು ನೀತಿ ಅನುಸಾರ ಕ್ರಮ ಜರುಗಿಸಲು ಜಿಲ್ಲಾ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಸೂಚಿಸಿದರು.

ಜಿಲ್ಲೆಯ ದೇವದುರ್ಗದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಮರಳುಗಾರಿಕೆ ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ಕಂದಾಯ ನಿರೀಕ್ಷಕರು ಕನಿಷ್ಠ 10ರಿಂದ 15 ವಾಹನಗಳ ತಪಾಸಣೆ ಮತ್ತು ಅಕ್ರಮ ಕಂಡು ಬಂದಲ್ಲಿ ಜಪ್ತಿ ಮಾಡಬೇಕು. ಪಿಡಿಒಗಳು ಸಹ ಕನಿಷ್ಠ 20-30 ವಾಹನಗಳನ್ನು ತಡೆದು, ತಪಾಸಣೆ ಮಾಡಿ ದಂಡ ಮತ್ತು ಕಾನೂನು ಕ್ರಮ ಜರುಗಿಸಲು ಸೂಚಿಸಿದರು.

ಎಲ್ಲಾ ಚೆಕ್ ಪೋಸ್ಟ್​​​ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಂಡು ತಾಲೂಕು ಅಧಿಕಾರಿಗಳು ತಮ್ಮ ಕಚೇರಿಯ ಮೂಲಕವೇ ನಿರಂತರವಾಗಿ ಅಕ್ರಮ ಮರಳು ಸಾಗಾಟ ತಡೆಯಲು ವಾಹನಗಳ ಮೇಲೆ ನಿಗಾ ಇಡಬೇಕು. ಈ ಐಪಿಸಿಸಿ ಕ್ಯಾಮರಾಗಳ ಅಳವಡಿಕೆಗೆ ಡಿಎಂಎಫ್ ನಿಧಿಯ ಬಳಕೆ ಮಾಡಲು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ABOUT THE AUTHOR

...view details