ಕರ್ನಾಟಕ

karnataka

ETV Bharat / state

ನಡುಗಡ್ಡೆ ಪ್ರದೇಶದ ನಿವಾಸಿಗಳಿಗೆ ತಾಲೂಕು ಆಡಳಿತದಿಂದ ಆಹಾರ ಧಾನ್ಯ ವಿತರಣೆ - ಉತ್ತರ ಕರ್ನಾಟಕ

ಕಳೆದ ಕೆಲದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ನಡುಗಡ್ಡೆ ಪ್ರದೇಶಗಳ ನಿವಾಸಿಗಳಿಗೆ ಆಹಾರ ಧಾನ್ಯಗಳು ಸಿಗದೆ ಪರದಾಡುತ್ತಿದ್ದರು. ಈ ವೇಳೆ ತಾಲೂಕು ಆಡಳಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದೆ.

Raichur district

By

Published : Aug 3, 2019, 7:05 PM IST

ರಾಯಚೂರು:ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಜಿಲ್ಲೆಯ ನಡುಗಡ್ಡೆ ಪ್ರದೇಶಗಳ ನಿವಾಸಿಗಳಿಗೆ ಆಹಾರ ಧಾನ್ಯಗಳು ಸಿಗದೆ ಪರದಾಡುತ್ತಿದ್ದರು. ಈ ವೇಳೆ ತಾಲೂಕು ಆಡಳಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದೆ.

ನಡುಗಡ್ಡೆ ಪ್ರದೇಶದ ನಿವಾಸಿಗಳಿಗೆ ತಾಲೂಕು ಆಡಳಿತದಿಂದ ಆಹಾರ ಧಾನ್ಯ ವಿತರಣೆ..

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ, ಕಡದರಗಡ್ಡಿ ಗ್ರಾಮದ ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಆಹಾರ ಧಾನ್ಯಗಳನ್ನ ವಿತರಣೆ ಮಾಡಲಾಗುತ್ತಿದೆ. ಕೃಷ್ಣ ನದಿಗೆ ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿ ಬಿಟ್ಟಿದ್ದರಿಂದ ಕಡದರಗಡ್ಡಿ, ಯರಗೋರಿ, ಕರಕಲ್‌ಗಡ್ಡಿಗಳು ಸೇರಿದಂತೆ ಕೆಲ ಗ್ರಾಮಗಳಿಗೆ ಪ್ರವಾಹ ಉಂಟಾಗಿ ಆಹಾರ ಧಾನ್ಯಗಳಿಗೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದಕ್ಕಾಗಿ ಲಿಂಗಸೂಗೂರು ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಆಹಾರ ಧಾನ್ಯಗಳು, ಸುರಕ್ಷತಾ ಎಚ್ಚರಿಕೆ ನೀಡಿ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇದರ ಜೊತೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ABOUT THE AUTHOR

...view details