ರಾಯಚೂರು: ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಆರಂಭಿಸಲಾದ ಖರೀದಿ ಕೇಂದ್ರಗಳ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ್ ಹೇಳಿದರು.
ಬೆಂಬಲ ಬೆಲೆ ಖರೀದಿ ಕೇಂದ್ರಗಳ ಆರಂಭ: ರಾಜಾ ಅಮರೇಶ್ವರ ನಾಯಕ್ - Support price buying centers
ರೈತರು ಬೆಳೆದ ಹತ್ತಿ ಬೆಳೆಯನ್ನ ಖರೀದಿ ಮಾಡಲು ಭಾರತೀಯ ಹತ್ತಿ ನಿಗಮದಿಂದ ಜಿಲ್ಲೆಯ ಮೂರು ಕಡೆ ಖರೀದಿ ಕೇಂದ್ರ ಗುರುತಿಸಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ್ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಆರಂಭಿಸಿರುವ ಹತ್ತಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಎಪಿಎಂಸಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಹತ್ತಿ ಬೆಳೆಯನ್ನ ಖರೀದಿ ಮಾಡಲು ಭಾರತೀಯ ಹತ್ತಿ ನಿಗಮದಿಂದ ಜಿಲ್ಲೆಯ ಮೂರು ಕಡೆ ಖರೀದಿ ಕೇಂದ್ರ ಗುರುತಿಸಲಾಗಿದೆ. ಅದರಲ್ಲಿ ಎರಡು ಕೇಂದ್ರಗಳು ಆರಂಭವಾಗಿವೆ. ಇದೀಗ ಹತ್ತಿ ಹೆಚ್ಚು ಆವಕವಾಗುತ್ತಿರುವುದರಿಂದ ಇನ್ನೊಂದು ಖರೀದಿ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದರು.
2019, ನ. 18ರಿಂದ ಸಿಸಿಐನಿಂದ ಹತ್ತಿ ಖರೀದಿ ಆರಂಭವಾಗಿದೆ. ಮಾರ್ಚ್ 17ವರೆಗೆ 1,070 ರೈತರಿಂದ 48,298 ಕ್ವಿಂಟಾಲ್ ಹತ್ತಿಯನ್ನ ಖರೀದಿಯನ್ನ ಮಾಡಲಾಗಿದೆ.